ಪುಣೆ: ಕೊವಿಶೀಲ್ಡ್ ಲಸಿಕೆಯನ್ನು ಸಿದ್ಧಪಡಿಸುತ್ತಿರುವ ಪುಣೆಯ “ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ಕ್ಕೆ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವುದರಿಂದ ಉಂಟಾಗುವ ಪರಿಣಾಮಗಳನ್ನು ಅಧ್ಯಯನ ನಡೆಸಲು ಸೂಚಿಸಲಾಗಿದೆ.
ಅದರಿಂದ ಲಭ್ಯವಾಗುವ ಫಲಿತಂಶಗಳನ್ನು ಕೇಂದ್ರ ಸರ್ಕಾರದ ಉನ್ನತಮಟ್ಟದ ವಿಷಯ ತಜ್ಞರ ಸಮಿತಿ (ಎಸ್‌ಇಸಿ)ಗೆ ಸಲ್ಲಿಸುವಂತೆ ಸಲಹೆ ಮಾಡಲಾಗಿದೆ. ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿರುವಂತೆಯೇ ಮತ್ತು ಬೂಸ್ಟರ್ ಡೋಸ್ ಲಸಿಕೆ ನೀಡಬೇಕು ಎಂಬ ಬಗ್ಗೆ ಬೇಡಿಕೆ ಹೆಚ್ಚಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ;- ವಾರಾಣಸಿ ಪಟ್ಟಣದಲ್ಲಿ ತಡರಾತ್ರಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ
ಡಿ.10ರಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ಎಸ್‌ಇಸಿ ನಡುವಿನ ಸಭೆಯಲ್ಲಿ ಸೀರಂ ಇನ್ಸ್ಟಿಟ್ಯೂಟ್‌ಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಅನುಮತಿ ನಿರಾಕರಿಸಲಾಗಿತ್ತು. ಇದರ ಜತೆಗೆ ಹೈದರಾಬಾದ್‌ನ ಬಯಲಾಜಿಕಲ್ ಇ ಸಂಸ್ಥೆ ಕೂಡ ಮೂರನೇ ಹಂತದ ಲಸಿಕೆ ಪ್ರಯೋಗದ ಬಗ್ಗೆ ಅಧ್ಯಯನ ನಡೆಸಲೂ ಉತ್ಸಾಹ ತೋರಿದೆ.
ಒಮಿಕ್ರಾನ್‌ಗೆ ಮೊದಲ ಸಾವು: ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ಗೆ, ಯು.ಕೆ.ನಲ್ಲಿ ಮೊದಲ ಸಾವು ವರದಿಯಾಗಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ತಿಳಿಸಿದ್ದಾರೆ. ಒಮಿಕ್ರಾನ್ ಕೊರೊನಾದ ಮತ್ತೂಂದು ಅಲೆ ಎನ್ನುವುದರಲ್ಲಿ ಅನುಮಾನ ಬೇಡ ಎಂದು ಅವರು ಹೇಳಿದ್ದಾರೆ.
ಆ ಹಿನ್ನೆಲೆಯಲ್ಲಿ ದೇಶದಲ್ಲಿ ಭಾನುವಾರದಿಂದಲೇ ಒಮಿಕ್ರಾನ್ ಎಮರ್ಜನ್ಸಿ ಹೇರಲಾಗಿದ್ದು, ಇದೇ ವಾರದಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಬೂಸ್ಟರ್ ಡೋಸ್ ನೀಡುವುದಾಗಿಯೂ ಹೇಳಲಾಗಿದೆ.