Advertisement
ಪುತ್ತೂರಿನಂತಹ ಕೆಲವೇ ಕಡೆಗಳಲ್ಲಿ ಮಾತ್ರ ಆದೇಶ ಉಲ್ಲಂ ಸಿ ಅನಗತ್ಯ ತಿರುಗಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಕಳೆದ ಒಂದೆರಡು ದಿನಗಳಿಗೆ ಹೋಲಿಸಿದರೆ ಶುಕ್ರವಾರ ಮಂಗಳೂರು ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ವಾಹನ ಸಂಚಾರವೂ ಕಡಿಮೆ ಇತ್ತು. ಬೆಳಗ್ಗೆ 10 ಗಂಟೆಯ ವರೆಗೆ ನಗರದಲ್ಲಿ ತುಸು ಜನ, ವಾಹನ ಸಂಚಾರ ಇತ್ತಾದರೂ ಬಳಿಕ ಕಡಿಮೆಯಾಗತೊಡಗಿತ್ತು. ಸಾರ್ವಜನಿಕರು ನಗರದ ವಿವಿಧ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಮಧ್ಯಾಹ್ನ 12 ಗಂಟೆಯ ಅನಂತರ ಎಲ್ಲಿಯೂ ರಸ್ತೆಗಳಲ್ಲಿ ಜನರು ಓಡಾಡು ತ್ತಿದ್ದದ್ದು ಅಷ್ಟಾಗಿ ಕಾಣಿಸುತ್ತಿರಲಿಲ್ಲ. ತುಂಬಾ ಅನಿವಾರ್ಯವಿದ್ದವರಷ್ಟೇ ಹೊರ ಬರುತ್ತಿದ್ದರು. ಜನತೆ ಈಗ ಲಾಕ್‌ಡೌನ್ ನಿಯಮವನ್ನು ಸಮ ರ್ಪಕವಾಗಿ ಪಾಲಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಮಹತ್ವ ನೀಡುತ್ತಿರುವುದು ಶ್ಲಾಘನೀಯ.
Related Articles
Advertisement
ಆವಶ್ಯಕ ಸಾಮಗ್ರಿ ಖರೀದಿಮಂಗಳೂರು ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೆಳಗ್ಗೆ ಸಾರ್ವಜನಿಕರಿದ್ದರು. ದಿನಸಿ, ತರಕಾರಿ, ಹಣ್ಣು ಹಂಪಲುಗಳ ಖರೀದಿ ಕಂಡುಬಂತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಕೆಲವು ಕಡೆಗಳಲ್ಲಿ ಬಾಗಿಲು ತೆರೆದ ಅಂಗಡಿಗಳನ್ನು ಪೊಲೀಸರು, ಮನಪಾ ಟಾಸ್ಕ್ಪೋರ್ಸ್ ತಂಡ ಮುಚ್ಚಿಸುತ್ತಿದ್ದ ದೃಶ್ಯ ನಗರದಲ್ಲಿ ಕಂಡುಬಂತು. ಅನಗತ್ಯ ವಾಹನ ಸಂಚಾರ ನಿಷೇಧ
ನಗರದಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸಬೇಡಿ. ಕೋವಿಡ್ 19 ಬಗ್ಗೆ ಜಾಗ್ರತೆ ವಹಿಸಿ ಎಂಬ ಬರಹವಿರುವ ಬ್ಯಾನರ್ ಅನ್ನು ನಗರದ ವಿವಿಧ ಕಡೆಗಳಲ್ಲಿ ಅಳವಡಿಸಲಾಗಿದೆ. ಸೆಂಟ್ರಲ್ ಮಾರುಕಟ್ಟೆಗೆ ಸರಕು ತುಂಬಿದ ಗೂಡ್ಸ್ ವಾಹನಗಳಿಗೆ ಮಾತ್ರ ಅವಕಾಶ ಎಂಬ ಬ್ಯಾನರ್ ಕೂಡ ಹಾಕಲಾಗಿದೆ.