Advertisement

ಶ್ರೀಕೃಷ್ಣ ಸೇವೆಗೆ ಬಂದವರಿಂದ ಕೋವಿಡ್ 19 ವಿರುದ್ಧ ಅಳಿಲ ಸೇವೆ

08:48 PM Apr 13, 2020 | Sriram |

ಉಡುಪಿ: ಶ್ರೀ ಕೃಷ್ಣನ ಸೇವೆಯನ್ನು ಮಾಡುತ್ತಿರುವ ಬಾಗಲ ಕೋಟೆಯ ಕುಣಿಬೆಂಚಿಯ ಶ್ರೀಕೃಷ್ಣ ಮುಖ್ಯಪ್ರಾಣ ಗ್ರಾಮೀಣ ಅಭಿವೃದ್ಧಿ ಹಾಗೂ ಕ್ರೀಡಾ ಸಾಂಸ್ಕೃತಿಕ ಸಂಘದ ಸದಸ್ಯರು ಮೂರು ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿ ಮಾಡುತ್ತಿದ್ದು, ದೇಶದಲ್ಲಿನ ಕೋವಿಡ್ 19 ವೈರಸ್‌ ವಿರುದ್ಧದ ಹೋರಾಟಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಿದ್ದಾರೆ.

Advertisement

ಶ್ರೀಕೃಷ್ಣ ಮಠದಲ್ಲಿ ಕೆಲಸಕ್ಕಿರುವ ಈ 10 ಮಂದಿ ಯುವಕರು ಸಂಘವನ್ನು ರಚಿಸಿಕೊಂಡಿದ್ದರು. ಅವರಲ್ಲಿ 6 ಮಂದಿ ಊರು ಸೇರಿಕೊಂಡಿದ್ದು, 4 ಮಂದಿ ಮಠದ ಪರಿಸರದಲ್ಲೇ ಉಳಿದುಕೊಡು, ಮಾಸ್ಕ್ ತಯಾರಿ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಜಿಲ್ಲಾಡಳಿತಕ್ಕೆ ನೀಡಲು ನಿರ್ಧಾರ
ಸುಮಾರು 3,000 ಮಾಸ್ಕ್ಗಳನ್ನು ಸಿದ್ಧಪಡಿಸಿ ಬಳಿಕ ಅದನ್ನು ಮಠದ ಸಿಬಂದಿಗೆ, ಜಿಲ್ಲಾಡಳಿತಕ್ಕೆ ನೀಡಲು ನಿರ್ಧರಿಸಿದ್ದಾರೆ. ಇದಕ್ಕವರು ಪರಿಚಯಸ್ಥ ಟೈಲರಿಂಗ್‌ ಯಂತ್ರ ಹೊಂದಿದ ವ್ಯಕ್ತಿಗಳ ನೆರವು ಪಡೆದುಕೊಂಡಿದ್ದಾರೆ.

ಕೈಲಾದ ಸಹಾಯ ಮಾಡುವ ಹಂಬಲ
ಮಾಸ್ಕ್ಗಳ ಕೊರತೆಯಿದೆ ಎಂಬುದನ್ನು ತಿಳಿದು ಸಹಾಯಕ್ಕೆ ಉದ್ದೇಶಿಸಿದ್ದೆವು. ಅದರಂತೆ ಬಟ್ಟೆ ತರಿಸಿ ಕೆಲಸ ಆರಂಭಿಸಿದೆವು. ಸಂಕಷ್ಟದ ಸಮಯದಲ್ಲಿ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ.
-ಮಂಜುನಾಥ,
ಮಾಸ್ಕ್ ತಯಾರಿಸುತ್ತಿರುವ ತಂಡದ ಯುವಕ

Advertisement

Udayavani is now on Telegram. Click here to join our channel and stay updated with the latest news.

Next