Advertisement

ಕೋವಿಡ್ ಗೆ ಆನೆ ಲದ್ದಿ ಮದ್ದು…?

04:05 PM Aug 23, 2020 | Suhan S |

ವಿಂಡ್‌ಹೋಕ್‌: ಕೋವಿಡ್ ಬೇರೆ ಔಷಧ ಬೇಡ. ಆನೆ ಲದ್ದಿ ಇದ್ದರೆ ಸಾಕು, ಅದರಿಂದಲೇ ರೋಗ ಗುಣವಾಗುತ್ತದೆ! ಹೀಗಂತ ಒಂದು ಸುದ್ದಿ ನಮೀಬಿಯಾದಲ್ಲಿ ಸರಕಾರದ ಚಿಂತೆಗೆ ಕಾರಣವಾಗಿದೆ.

Advertisement

ಇದೊಂದು ಸುಳ್ಳು ಸುದ್ದಿಯಾಗಿದ್ದು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಜತೆಗೆ ಅಂತರ್ಜಾಲದಲ್ಲಿ ಆನೆ ಲದ್ದಿ ಎಂದು ಹಲವರು ಭಾರೀ ಬೆಲೆಗೆ ಮಾರಾಟ ಮಾಡತೊಡಗಿದ್ದಾರೆ. ಜನರು ಇದನ್ನು ನಂಬುತ್ತಿರುವುದರಿಂದ ಮತ್ತು ಇದು ಅವಾಂತರ ಸೃಷ್ಟಿಸುವ ಭಯದಿಂದ ನಮೀಬಿಯಾ ಸರಕಾರ, ಈ ಬಗ್ಗೆ ಜಾಗೃತಿಗೆ ಮುಂದಾಗಿದೆ. ಅಲ್ಲಿನ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆಗಳು ಆನೆ ಲದ್ದಿಯಿಂದ ಕೋವಿಡ್ ಗುಣವಾಗಲ್ಲ ಎಂದು ಹೇಳುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟನೆಯನ್ನೂ ನೀಡಿವೆ.

 ಜಗತ್ತಿನಲ್ಲಿ 2.23 ಕೋಟಿ ಕೋವಿಡ್ ಸೋಂಕಿತರು : ಜಿನೇವಾ: ಜಗತ್ತಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಸರ್ವಾಧಿಕ 2.23 ಕೋಟಿಗೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 8 ಲಕ್ಷದ ಸನಿಹದಲ್ಲಿದೆ ಎಂದು ಜಾನ್ಸ್‌ ಹಾಪಿRನ್ಸ್‌ ವಿಶ್ವವಿದ್ಯಾಲಯ ಹೇಳಿದೆ. ಅಮೆರಿಕದಲ್ಲಿ ಅತ್ಯಧಿಕ ಸಂಖ್ಯೆಯ ಪ್ರಕರಣಗಳಿದ್ದು, 54.80 ಲಕ್ಷಕ್ಕೇರಿದೆ. 1.71 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಬ್ರಜಿಲ್‌ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ 34 ಲಕ್ಷ ಮಂದಿ ಸೋಂಕಿತರಿದ್ದರೆ, ಸಾವಿನ ಪ್ರಮಾಣ 1.09 ಲಕ್ಷಕ್ಕೇರಿದೆ.

ಇರಾನ್‌ : 20 ಸಾವಿರ ಗಡಿ ದಾಟಿದ ಸಾವಿನ ಪ್ರಮಾಣ :ಟೆಹ್ರಾನ್‌ : ಇರಾನ್‌ ದೇಶದಲ್ಲಿ ಕೋವಿಡ್‌ ಸೋಂಕಿನಿಂದಾಗಿ ಮೃತಪಡುವರ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿನ ಆರೋಗ್ಯ ಸಚಿವಾಲಯ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ದೇಶದ ಒಟ್ಟಾರೆ ಮರಣ ಪ್ರಮಾಣ ಇಪ್ಪತ್ತು ಸಾವಿರ ಗಡಿ ದಾಟಿದ್ದು, ಮಧ್ಯಪ್ರಾಚ್ಯ ಪ್ರದೇಶಗಳಲ್ಲಿಅತೀ ಹೆಚ್ಚು ಸೋಂಕು ಸಾವು ಪ್ರಕರಣಗಳು ವರದಿಯಾದ ದೇಶ ಇದಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next