Advertisement
ಯುವಕರು ಕಚೇರಿಗೆ ಹೋಗುವ ಕ್ಷಣದಲ್ಲಿ ಅವರು ಗುಂಪಿನಲ್ಲಿ ಸುತ್ತಾಡುತ್ತಿದ್ದಾರೆ. ಹೊರಗೆ ಪಾರ್ಟಿ ಮಾಡುತ್ತಾರೆ. ಕೆಲಸಕ್ಕಾಗಿ ಯುವಕರು ಕೂಡ ಹೊರಟಿದ್ದಾರೆ. ಈ ಕಾರಣದಿಂದಾಗಿ ಯುವಕರಲ್ಲಿ ಸೋಂಕಿನ ಪ್ರಮಾಣ ಈಗ ಹೆಚ್ಚುತ್ತಿದೆ. ಅವರು ಇತರರಿಗೂ ಸೋಂಕು ತಗುಲಿಸುತ್ತಿದ್ದಾರೆ. ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಲು ಯುವಕರಿಗೆ ತುಂಬಾ ಸಮಯಬೇಕಾಗಬಹುದು ಅಥವ ವೈರಸ್ ಪ್ರಭಲವಾಗಿದ್ದರೆ ಮಾತ್ರ ಆತನಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಕಡಿಮೆ ಪ್ರಮಾಣದಲ್ಲಿ ಯುವಜನರಲ್ಲಿ ರೋಗಲಕ್ಷಣಗಳು ಕಂಡುಬರುವುದಿಲ್ಲ. ಯಾಕೆಂದರೆ ಯುವಕರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಕೋವಿಡ್ ಇರುವ ಸೋಂಕಿತ ಮತ್ತೂಬ್ಬರೊಂದಿಗೆ ಮಾಸ್ಕ್ ಧರಿಸದೆ 15 ನಿಮಿಷಗಳ ಕಾಲ ಮಾತನಾಡಿದರೆ ಅವರ ನಡುವಿನ ಅಂತರವು ಮೂರು ಅಡಿಗಳಿಗಿಂತ ಕಡಿಮೆಯಿದ್ದರೆ ಅದನ್ನು ನಿಕಟ ಸಂಪರ್ಕ ಸಮಯ ಎಂದು ಕರೆಯಲಾಗುತ್ತದೆ.
ಈ ದಿನಗಳಲ್ಲಿ ಯುವಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕ್ರಮಗಳನ್ನು ಅನುಸರಿಸುತ್ತಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ರೋಗಲಕ್ಷಣವಿಲ್ಲದ ರೋಗಿಗಳು ತುಂಬಾ ಅಪಾಯಕಾರಿಯಾಗಿದ್ದು, ಇತತರಿಗೆ ಸೋಂಕನ್ನು ತಗುಲಿಸುತ್ತಾರೆ. ರೋಗಲಕ್ಷಣವಿಲ್ಲದ ಹೆಚ್ಚಿನ ಪ್ರಕರಣಗಳು ಯುವ ಜನರಲ್ಲಿ ಸಮಾನ್ಯವಾಗಿ ಕಂಡುಬರುತ್ತಿವೆ. ಕಳೆದ ಐದು ತಿಂಗಳಲ್ಲಿ 15ರಿಂದ 24 ವರ್ಷದ ಯುವಕರಲ್ಲಿ ಸೋಂಕಿನ ಅಪಾಯ ಮೂರು ಪಟ್ಟು ಹೆಚ್ಚಾಗಿದೆ. ಫೆಬ್ರವರಿ 24ರಿಂದ ಜುಲೈ 12ರ ವರೆಗೆ 6 ಮಿಲಿಯನ್ ಕೋವಿಡ್ ಪ್ರಕರಣಗಳನ್ನು ಅಧ್ಯಯನ ಮಾಡಲಾಗಿದೆ. ಮಕ್ಕಳು ಮತ್ತು ಯುವಜನರಲ್ಲಿ ಸೋಂಕಿನ ವೇಗ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
Related Articles
Advertisement