Advertisement

ರೋಗಲಕ್ಷಣ ಹೊಂದಿರುವವರಲ್ಲಿ ಕೋವಿಡ್ ಸೋಂಕಿನ ಅಪಾಯ ಹೆಚ್ಚು

03:05 PM Jun 11, 2020 | sudhir |

ಜಿನೇವಾ: ಕೋವಿಡ್ ವೈರಸ್‌ ಸೋಂಕಿಗೆ ಒಳಗಾದ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾದಾಗ ಹೆಚ್ಚು ವೇಗವಾಗಿ ಇನ್ನೊಬ್ಬರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಹೇಳಿದ್ದಾರೆ.

Advertisement

ಈ ಗುಣದಿಂದಾಗಿ ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸಲು ತುಂಬಾ ಕಷ್ಟಕರವಾಗಿದೆ. ಆದರೆ ಕಠಿನ ಪರೀಕ್ಷೆ ಮತ್ತು ಸಾಮಾಜಿಕ ಅಂತರದಿಂದ ಸೋಂಕು ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಬಹುದು ಎಂದು ಅವರು ಹೇಳಿದರು.

ವ್ಯಕ್ತಿಯು ರೋಗಲಕ್ಷಣಗಳನ್ನು ಹೊಂದಿರುವ ಸಂದರ್ಭದಲ್ಲಿ ಆತನ ದೇಹದಲ್ಲಿ ಹೆಚ್ಚು ವೈರಸ್‌ಗಳಿರುತ್ತವೆ ಎಂದು ತಮಗೆ ಸಿಕ್ಕಿರುವ ಸೀಮಿತ ಮಾಹಿತಿಯಿಂದ ಸ್ಪಷ್ಟವಾಗಿದೆ ಎಂದು ಡಬ್ಲ್ಯುಎಚ್‌ಒ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾಂಕ್ರಾಮಿಕ ರೋಗದ ತಾಂತ್ರಿಕ ಪ್ರಮುಖರಾದ ಮಾರಿಯಾ ವಾನ್‌ ಕೆರ್ಖೋವ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ನಡೆದ ಲೈವ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಸಾಮಾನ್ಯ ರೋಗಲಕ್ಷಣವನ್ನು ಹೊಂದಿರುವವರಲ್ಲಿ ಸೋಂಕಿನ ಅವಧಿಯು 8-9 ದಿನಗಳವರೆಗೆ ಇರಬಹುದು ಹಾಗೂ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಇದು ತುಂಬಾ ದೀರ್ಘ‌ಕಾಲವಾಗಿರಬಹುದು ಎಂದು ಜರ್ಮನಿ ಮತ್ತು ಯುನೈಟೆಡ್‌ ಸ್ಟೇಟ್ಸ್‌ ನಡೆಸಿದ ಪ್ರಾಥಮಿಕ ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.

ಇದಕ್ಕೂ ಮೊದಲು ಕೆಲವು ರೋಗಶಾಸ್ತ್ರ ತಜ್ಞರು ಇವರ ಹೇಳಿಕೆ ಯನ್ನು ಪ್ರಶ್ನಿಸಿದ್ದರಲ್ಲದೆ, ರೋಗ ಲಕ್ಷಣವನ್ನು ಹೊಂದಿಲ್ಲದವರಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ತೀರಾ ವಿರಳ ಎಂದಿದ್ದರು.

Advertisement

ಕೆಲವು ರೋಗ ಮಾದರಿ ಅಧ್ಯಯನಗಳನ್ನು ಉಲ್ಲೇಖೀಸಿ ವಾನ್‌ ಕೆರ್ಖೋವ್‌ ಅವರು ಮಂಗಳವಾರ ಹೇಳಿಕೆ ಯೊಂದನ್ನು ನೀಡಿದ್ದು, ಯಾವುದೇ ರೋಗ ಲಕ್ಷಣಗಳನ್ನು ಹೊಂದಿಲ್ಲದವರೂ ಇತರರಿಗೆ ಸೋಂಕು ಹರಡುತ್ತಾರೆ ಎಂದು ಹೇಳಿದ್ದಾರೆ.

“ಸುಮಾರು ಶೇ. 40ರಷ್ಟು ಸೋಂಕು ಯಾವುದೇ ರೋಗ ಲಕ್ಷಣಗಳಿಲ್ಲ ದವರಿಂದ ಹರಡಿದ್ದಾಗಿದೆ ಎಂದು ಕೆಲವರು ಅಂದಾಜಿಸಿದ್ದಾರೆ. ಆದ್ದರಿಂದ ಅದನ್ನು ತಾನು ಸೋಮವಾರದ ಉತ್ತರದಲ್ಲಿ ತಿಳಿಸಿರಲಿಲ್ಲ. ಈಗ ಅದನ್ನು ಸ್ಪಷ್ಟಪಡಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಕೋವಿಡ್ ವೈರಸ್‌ ಶ್ವಾಸಕೋಶದ ಮೇಲ್ಭಾಗದಲ್ಲಿರುತ್ತದೆ ಮತ್ತು ಅದು ಕೆಳಭಾಗದಲ್ಲಿರುವಂತಹ ಇದೇ ರೀತಿಯ ವೈರಸ್‌ಗಳಾದ ಸಾರ್ಸ್‌ ಮತ್ತು ಮೆರ್ಸ್‌ಗಿಂತ ಸುಲಭವಾಗಿ ಹನಿಗಳ ರೂಪದಲ್ಲಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಆರೋಗ್ಯ ಪರಿಸ್ಥಿತಿ ತಜ್ಞರಾದ ಡಾ| ಮೈಕ್‌ ರ‌್ಯಾನ್‌ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next