Advertisement
ಸಂಶೋಧನೆ ಪ್ರಕಾರ, ಸ್ಥೂಲಕಾಯ, ಹಲವು ಕಾಯಿಲೆಗಳನ್ನು ಹೊಂದಿರುವುದು, ಕ್ಯಾನ್ಸರ್ ಮತ್ತು ಟೈಪ್ 2 ಡಯಾಬಿಟೀಸ್ ಹೊಂದಿರುವುದರಿಂದ ಸಮಸ್ಯೆ ಹೆಚ್ಚಾಗಬಹುದು. ಲಂಡನ್‌ನ ಕೋವಿಡ್ ರೋಗಿಗಳನ್ನು ಗುರಿಯಾಗಿಸಿ ನಡೆಸಿದ ಅಧ್ಯಯನವೊಂದರ ಪ್ರಕಾರ ಬಾಡಿ ಮಾಸ್ ಇಂಡಕ್ಸ್ 30ಕ್ಕಿಂತ ಹೆಚ್ಚಿದ್ದರೆ, ಶೇ.33ರಷ್ಟು ಪ್ರಾಣಾಪಾಯವಿದೆ. ಎನ್‌ಎಚ್‌ಎಸ್ ಹೆಲ್ತ್ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ಸ್ ಪ್ರಕಾರ, ಸ್ಥೂಲಕಾಯ, ಟೈಪ್ 2 ಸಕ್ಕರೆ ಕಾಯಿಲೆ ಹೊಂದಿದವರಿಗೆ ಕೋವಿಡ್ ಬೇಗನೆ ಬರಬಹುದು ಮತ್ತು ಸಾವು ಸಂಭವಿಸುವ ಸಾಧ್ಯತೆ ಸಾಮಾನ್ಯರಿಗಿಂತ ದುಪ್ಪಟ್ಟಾಗಿರಬಹುದು ಎಂದು ಹೇಳಲಾಗಿದೆ.
ಸಂಶೋಧಕರ ಪ್ರಕಾರ ಲಂಡನ್ ಜನರಲ್ಲಿ ಶೇ.30ರಷ್ಟು ಮಂದಿ ಸ್ಥೂಲಕಾಯ, ಬೊಜ್ಜಿನ ಸಮಸ್ಯೆ ಹೊಂದಿದವರಿದ್ದಾರಂತೆ. ಇವರಿಗೆ ಕೋವಿಡ್ ಬರುವ ಸಾಧ್ಯತೆ ಮತ್ತು ಪ್ರಾಣಾಪಾಯದ ಸಾಧ್ಯತೆ ಹೆಚ್ಚು ಮತ್ತು ಸಮಾನವಾಗಿದೆ ಎಂದು ಹೇಳಲಾಗಿದೆ.
ವಿಶ್ವ ಬೊಜ್ಜಿನ ದತ್ತಾಂಶಗಳಿಗೆ ಹೋಲಿಸಿದಾಗ, ಬಾಡಿ ಮಾಸ್ ಇಂಡಕ್ಸ್ 25ಕ್ಕಿಂತ ಹೆಚ್ಚಿದ್ದರೆ ಕೋವಿಡ್ ಪ್ರಾಣಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.