Advertisement
ಸೋಂಕಿತಲ್ಲಿ ಬಹುತೇಕರು ಮುಂಬಯಿಯಿಂದ ಬಂದವರು. ಮುಂಬಯಿಯಲ್ಲಿ ಸಮುದಾಯದಲ್ಲಿ ಸೋಂಕು ಹರಡಿರುವುದರ ಲಕ್ಷಣವಿದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಮುದಾಯ ದಲ್ಲಿ ಹರಡದೆ ಇರಬೇಕಾದರೆ ಸರಕಾರ, ಜಿಲ್ಲಾಡಳಿತದ ಮೇಲೆ ಹೊಣೆ ಹೊರಿಸಿ ಇರುವಂತಿಲ್ಲ. ಸಮುದಾಯವೇ ಸ್ವಯಂ ಆಸಕ್ತಿಯಿಂದ ಕೆಲವು ಶಿಸ್ತು ಪಾಲಿಸಬೇಕಾಗಿದೆ.
ಕೈಗಳನ್ನು ಆಗಾಗ್ಗೆ ಸ್ವತ್ಛಗೊಳಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸಾಧ್ಯವಾದಷ್ಟು ದೂರದಲ್ಲಿಯೇ ಇರುವುದು, ಮಾಸ್ಕ್ ಧರಿಸುತ್ತ ಗಮನ ಹರಿಸಿದರೆ ಸಾಕು ಎನ್ನುತ್ತಾರೆ ಉಡುಪಿ ಡಾ| ಟಿಎಂಎ ಪೈ ನಿಯೋಜಿತ ಕೋವಿಡ್ – 19 ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ| ಶಶಿಕಿರಣ್ ಉಮಾಕಾಂತ್. ಶೇ. 90 ಸೋಂಕು ಪೀಡಿತರಿಗೆ ಲಕ್ಷಣಗಳಿಲ್ಲ
ಮಾದರಿಗಳನ್ನು ಬಹಳ ಹಿಂದೆಯೇ ಕಳುಹಿಸಲಾಗಿತ್ತು. ಪ್ರಯೋಗಾಲಯ ಗಳಿಗೆ ಒತ್ತಡ ಹೆಚ್ಚಿದ ಕಾರಣ ಮಾದರಿಗಳನ್ನು ಪರೀಕ್ಷಿಸಲು ತಡ ವಾಯಿತು. ಈಗ ಪರೀಕ್ಷೆ ನಡೆಸಿ ವರದಿ ಬಂದಿದೆ. ಈ 150 ಜನರಲ್ಲಿ ಕೆಲವೇ ಕೆಲವರಿಗೆ ರೋಗ ಲಕ್ಷಣಗಳಿರ
ಬಹುದೇ ವಿನಾ ಎಲ್ಲರಿಗೂ ಇಲ್ಲ. ಗಂಟಲುದ್ರವ ಮಾದರಿಯನ್ನು ಕಳುಹಿಸುವಾಗಲೂ ಇಂತಹವರಿಗೆ ರೋಗ ಲಕ್ಷಣವಿರಲಿಲ್ಲ, ಈಗಲೂ ಇಲ್ಲ. ಆದರೆ ವೈರಸ್ ಇರುತ್ತದೆ, ಅವೇನೂ ಅವರಿಗೆ ಉಪದ್ರವ ಕೊಟ್ಟಿಲ್ಲ. ಕೊಡುವುದೂ ಇಲ್ಲ. ಇಂತಹ ಅನೇಕ ರೋಗಾಣುಗಳು ನಮ್ಮ ಶರೀರದಲ್ಲಿ ಬದುಕಿಕೊಂಡಿವೆ.ಒಟ್ಟಾರೆ ಸೋಂಕು ಪೀಡಿತರಲ್ಲಿ ಶೇ. 10ರಷ್ಟು ಜನರಿಗೆ ಮಾತ್ರ ಶೀತ, ಜ್ವರ,
ಕೆಮ್ಮು ಇತ್ಯಾದಿ ಲಕ್ಷಣಗಳು ಕಂಡುಬರುತ್ತಿವೆ. ಹೃದಯ ರೋಗ, ಉಸಿರಾಟ, ಕಿಡ್ನಿ, ಅಸ್ತಮಾ ಇತ್ಯಾದಿ ಸಮಸ್ಯೆ ಇರುವವರಿಗೆ ಸೋಂಕು ಉಂಟಾದರೆ ಈಗಾಗಲೇ ಇರುವ ರೋಗ ಉಲ್ಬಣ ಗೊಳ್ಳುತ್ತದೆ. ಆದ್ದರಿಂದ ವಿಶೇಷವಾಗಿ ವೃದ್ಧರು, ರೋಗಿಗಳು, ಗರ್ಭಿಣಿ ಯರು, ಚಿಕ್ಕ ಮಕ್ಕಳನ್ನು ಜಾಗರೂಕ ವಾಗಿ ನೋಡಿಕೊಳ್ಳಬೇಕಾಗಿದೆ.
Related Articles
ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಈಗಿರುವ ಕೊರೊನಾ ರೋಗಿಗಳು ಕೇವಲ 36. ಯಾರಿಗೆ ತೀವ್ರ ಉಸಿರಾಟದ ಸಮಸ್ಯೆ ಇದೆಯೋ ಅಂತಹವರನ್ನು ಮಾತ್ರ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುತ್ತಿದೆ.
ರೋಗ ಲಕ್ಷಣ ಇಲ್ಲದಿರುವವರನ್ನು ಇತರ ನಿಯೋಜಿತ ಆಸ್ಪತ್ರೆಗೆ ದಾಖಲಿಸ ಲಾಗುತ್ತಿದೆ ಎಂದು ಡಾ| ಶಶಿಕಿರಣ್ ಉಮಾಕಾಂತ್ ಮತ್ತು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
Advertisement
ಸೋಂಕು ಪೀಡಿತರಲ್ಲಿ ಶೇ. 10 ಜನರಿಗೆ ಮಾತ್ರ ಲಕ್ಷಣಕೈತೊಳೆದುಕೊಳ್ಳುವ, ಅಂತರ ಕಾಪಾಡುವ, ಗುಂಪಿನಲ್ಲಿ ಸೇರದೆ ಇರುವ, ಮಾಸ್ಕ್ ಧರಿಸುವ ನಾಲ್ಕು ವ್ರತಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಯಾವ ತೊಂದರೆಯೂ ಬರುವುದಿಲ್ಲ. ಇಲ್ಲಿ ಸಮುದಾಯಕ್ಕೆ ಸೋಂಕು ಹರಡಿಲ್ಲ. ಎಷ್ಟೋ ಜನರ ದೇಹದಲ್ಲಿ ಅನೇಕ ವೈರಸ್‌ಗಳು ಇವೆ. ಎಷ್ಟೋ ಜನರಿಗೆ ಕೊರೊನಾ ವೈರಸ್ ಕೂಡ ಏನೂ ತೊಂದರೆ ಕೊಡದೆ ಇರುತ್ತದೆ. ಶೇ. 10 ಸೋಂಕುಪೀಡಿತರಿಗೆ ಮಾತ್ರ ಕೊರೊನಾ ಲಕ್ಷಣಗಳಿರುತ್ತವೆ. – ಡಾ| ಶಶಿಕಿರಣ್ ಉಮಾಕಾಂತ್, ನೋಡಲ್ ಅಧಿಕಾರಿ ಮತ್ತು ಮೆಡಿಸಿನ್ ವಿಭಾಗ ಮುಖ್ಯಸ್ಥರು, ಡಾ| ಟಿಎಂಎ ಪೈ ಆಸ್ಪತ್ರೆ (ನಿಯೋಜಿತ ಕೋವಿಡ್-19 ಆಸ್ಪತ್ರೆ), ಉಡುಪಿ.