Advertisement
ಏಷ್ಯಾ, ಆಫ್ರಿಕಾ ಮತ್ತು ಉತ್ತರ ಅಮೆರಿಕ ಖಂಡಗಳ 238 ಆಸ್ಪತ್ರೆಗಳಿಂದ 1128 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ ರಾಷ್ಟ್ರೀಯ ಆರೋಗ್ಯ ಸಂಶೋಧನ ಸಂಸ್ಥೆ ಹಾಗೂ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯದ ಅಧ್ಯಯನ ತಂಡ ಈ ವಿಷಯವನ್ನು ಬಯಲಿಗೆಳೆದಿದೆ. ಮರಣದ ಪ್ರಮಾಣವೂ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಕೋವಿಡ್ ಅನಂತರದಲ್ಲಿ ಅಧಿಕವಾಗಿದೆ.
ಇದರಲ್ಲಿ ಆಯ್ಕೆಯ ಶಸ್ತ್ರ ಚಿಕಿತ್ಸೆ ಶೇ.18.9, ತುರ್ತುಶಸ್ತ್ರ ಚಿಕಿತ್ಸೆ ಶೇ.23.6, ಸಣ್ಣ ಶಸ್ತ್ರ ಚಿಕಿತ್ಸೆ ಶೇ. 16.3, ಹಾಗೂ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗಳಲ್ಲಿ ಮರಣ ಹೊಂದಿದವರ ಸಂಖ್ಯೆ ಶೇ.26.9 ಆಗಿದೆ. ಇದು ಅಸಮತೋಲನ ಮರಣ ಪ್ರಮಾಣವೆಂದು ಅಧ್ಯಯನ ಸ್ಪಷ್ಟಪಡಿಸುತ್ತದೆ. ಮರಣ ಪ್ರಮಾಣ ಪುರುಷರಲ್ಲೇ ಹೆಚ್ಚಿದೆ ಎಂದು ಅಧ್ಯಯನವು ಬೊಟ್ಟು ಮಾಡಿದೆ. ಮಹಿಳೆಯರ ಮರಣ ಪ್ರಮಾಣವು ಶೇ.18.2 ಹಾಗೂ ಪುರುಷರ ಮರಣ ಪ್ರಮಾಣವು ಶೇ.28.4 ಆಗಿದೆ. 70 ವರ್ಷಗಳ ಮೇಲ್ಪಟ್ಟವರಿಗೆ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಶೇ. 33.7 ಹಾಗೂ 70 ವರ್ಷಕ್ಕಿಂತ ಕಡಿಮೆ ಹರೆಯದವರಿಗೆ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಶೇ. 13.9 ಮರಣ ಪ್ರಮಾಣ ದಾಖಲಾಗಿದೆ.
ವಯಸ್ಸು, ಲಿಂಗವನ್ನು ಹೊರತು ಪಡಿಸಿ ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಸಮಸ್ಯೆಗಳ ಜತೆಗೆ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಹಾಗೂ ತೀವ್ರತರವಾದ ಆರೋಗ್ಯ ಸಮಸ್ಯೆಗಳು ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬುದನ್ನು ಅಧ್ಯಯನ ದೃಢಪಡಿಸಿದೆ.