Advertisement

ಬಾಲಿ ಕೋವಿಡ್‌ 19ರಿಂದ ತಪ್ಪಿಸಿಕೊಂಡಿದ್ದೇ ಸೋಜಿಗ

02:31 PM May 04, 2020 | sudhir |

ಮಣಿಪಾಲ: ಇಡೀ ವಿಶ್ವವನ್ನೇ ಕೋವಿಡ್‌-19 ಪೀಡಿಸುತ್ತಿದೆ ಎಂಬ ವರದಿಗಳು ಪ್ರತಿನಿತ್ಯ ಹೊರ ಬೀಳುತ್ತಲೇ ಇದೆ. ಕೆಲವೆಡೆ ಸೋಂಕು ನೆರಳು ಬೀಳುತ್ತಿದ್ದಂತೆಯೇ ಹತೋಟಿಗೆ ತರಲಾಗಿದೆ. ಅಂತಹ ಪ್ರದೇಶಗಳ ಪೈಕಿ ಇಂಡೋನೆಷ್ಯಾದ ಲಕ್ಷಗಟ್ಟಲೇ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುವ ಬಾಲಿ ಗುರುತಿಸಿಕೊಂಡಿದ್ದು, ಸೋಂಕು ನಿಯಂತ್ರಣಗೊಂಡಿದೆ. ಇಲ್ಲಿನ ದೈನಂದಿನ ಚಟುವಟಿಕೆಗಳು ಸಹಜ ಸ್ಥಿತಿಯಲ್ಲಿ ನಡೆಯುತ್ತಿವೆ ಎಂದು ಅಲ್‌ಜಜೀರಾ ವರದಿ ಮಾಡಿದೆ.

Advertisement

ಸೋಂಕು ನಿಯಂತ್ರಣ ಸಲುವಾಗಿ ಕಳೆದ ಮಾರ್ಚ್‌ 21ರಂದೇ ದ್ವೀಪದಲ್ಲಿ ಕಾರ್ಯಾಚರಿಸುತ್ತಿರುವ ರೆಸಾರ್ಟ್‌ಗಳೆಲ್ಲ ಸ್ಥಗಿತಗೊಂಡಿದ್ದವು. ಆದರೆ ಇಲ್ಲಿಯವರೆಗೂ ಕೇವಲ 235 ಸೋಂಕು ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ 121 ಜನರ ಚೇತರಿಕೊಂಡು, 4 ಜನ ಮಾತ್ರ ಮೃತಪಟ್ಟಿದ್ದಾರೆ. ಲಕ್ಷಾಂತರ ಪ್ರವಾಸಿಗರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವ ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳ ಹೇಗೆ ಸೋಂಕಿನಿಂದ ಪಾರಾಯಿತು? ಇದರ ಹಿಂದಿನ ಮರ್ಮವೇನು ಎಂಬಿತ್ಯಾದಿ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿವೆ. ಈ ಬೆಳವಣಿಗೆ ಕಂಡ ಇಂಡೋನೇಷ್ಯಾದ ವೈದ್ಯಾಧಿಕಾರಿಗಳು ದೇಶದ ಮುಂದಿನ ಹಾಟ್‌ಸ್ಪಾಟ್‌ ಆಗಿ ಬಾಲಿ ಗುರುತಿಸಿಕೊಂಡೀತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಾಲಿಯ ಆರೋಗ್ಯಕರ ಬೆಳವಣಿಗೆ ಕುರಿತು ವ್ಯಾಪಾಕವಾಗಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ದೇಶ ಸೋಂಕಿನ ವಿರುದ್ಧ ಹೋರಾಡಲು ರಹಸ್ಯವಾದ ಮಾರ್ಗ ಕಂಡುಕೊಂಡಿದೆ ಎಂದು ಹೇಳುತ್ತಿದ್ದು, ಅವರು ಸೇವಿಸುವ ಆಹಾರ ಪದಾರ್ಥಗಳಲ್ಲಿ ಔಷಧಿಯುಕ್ತ ಗಿಡಮೂಲಿಕೆಗಳ ಸತ್ವವನ್ನು ಒಳಗೊಂಡಿದೆ. ಆ ಮೂಲಕ ಅವರ ಆಹಾರ ಪದ್ಧತಿ ಶೈಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತಿದೆ.

ತಜ್ಞರ ಕಳವಳ
ಕೋವಿಡ್‌-19ನಿಂದಾಗಿ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇಂಡೋನೇಷ್ಯಾ ಕೂಡ ಒಂದು. ಆದರೆ ಬಾಲಿಯಲ್ಲಿ ಸೋಂಕು ಪ್ರಕರಣ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿದೆ. ಸದ್ಯ ದೊರಕುತ್ತಿರುವ ಅಂಶಗಳು ವಾಸ್ತವಿಕತೆಯಿಂದ ದೂರವಿದ್ದು, ನಿಗದಿತ ಅಂಕಿ-ಅಂಶ ಸಿಗುತ್ತಿಲ್ಲ . ಟ್ಯಾಲಿಂಗ್‌ ಸೈಟ್‌ ವರ್ಲ್ಡೋಮೀಟರ್‌ ಪ್ರಕಾರ, ಸುಮಾರು 40 ಲಕ್ಷ ಜನರಿರುವ ಬಾಲಿಯಲ್ಲಿ, ಇದುವರೆಗೆ ಕೇವಲ 1,300 ಪರೀಕ್ಷೆಗಳನ್ನು ಮಾತ್ರ ನಡೆಸಲಾಗಿದ್ದು, ಅದರಲ್ಲಿ ಕೇವಲ 374 ಮಾತ್ರ ಪ್ರಕರಣಗಳು ದಾಖಲಾಗಿದೆ.

ಆದರೆ ಇತರೆ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಪ್ರತಿ ಮಿಲಿಯನ್‌ಗೆ 20,241 ಮತ್ತು ಸಿಂಗಾಪುರದಲ್ಲಿ 24,600ರಷ್ಟು ಪ್ರಕರಣಗಳು ವರದಿಯಾಗಿವೆ. ಈ ಬೆಳವಣಿಗೆ ಸಂತೋಷವನ್ನು ನೀಡುವ ಬದಲು ಕ್ಷಣ ಕ್ಷಣಕ್ಕೂ ಭಯವನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಅಂತರ್ಮುಖೀಯಾಗಿದೆಯೇ?
ಯಾವುದೇ ನಿಬಂಧನೆಗಳಿಲ್ಲದೇ ಸುರಕ್ಷಾ ಕ್ರಮಗಳ ಪಾಲನೆ ಮಾಡದೇ ಜೀವನ ನಡೆಸುತ್ತಿದ್ದಾರೆ. ಆದರೂ ಹೇಗೆ ಸೋಂಕು ನಿಯಂತ್ರಣಗೊಂಡಿತು ಎಂಬುದೇ ಸದ್ಯದ ಪ್ರಶ್ನೆಯಾಗಿದ್ದು, ಶಂಕಿತರ ಪರೀಕ್ಷಾ ಮಾದರಿಗಳ ಸಂಗ್ರಹಿಸುವಲ್ಲಿ ದೇಶ ಹಿಂದೆ ಬಿದ್ದಿರಬಹುದು ಎಂದು ಕೆಲವು

ವೈದ್ಯರು ಗುಮಾನಿ ವ್ಯಕ್ತಪಡಿಸುತ್ತಿದ್ದಾರೆ. ಪರೀಕ್ಷೆ ನಡೆಯದೇ ಇರುವುದರಿಂದ ಇನ್ನೂ ಬಹಿರಂಗ ಆಗದೆ ಇರಬಹುದು. ಮುಂದೆ ಸ್ಫೋಟಗೊಳ್ಳಲೂ ಬಹುದು. ಹೆಚ್ಚು ತಾಪಮಾನ ಇರುತ್ತದೆಯೋ ಅಲ್ಲಿ ಸೋಂಕು ಪ್ರಸರಣ ಮಟ್ಟ ಕಡಿಮೆ ಇರುತ್ತದೆ ಎಂಬ ಸಿದ್ಧಾಂತವನ್ನು ಕೆಲವರು ಉಲ್ಲೇಖ ಮಾಡಿದ್ದು, ಸದ್ಯ ಬಾಲಿಯಲ್ಲಿ ತಾಪಮಾನ ಹೆಚ್ಚಿದ್ದು, ನಗರಕ್ಕೆ ಇದು
ವರದಾನವಾಗಿರಬಹುದೆಂದು ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next