Advertisement

ಚೀನ ಕೊಟ್ಟ ವೈದ್ಯಕೀಯ ಸಲಕರಣೆ ಪಿಒಕೆಗೆ ಇಲ್ಲ

01:39 PM Apr 03, 2020 | sudhir |

ಮಣಿಪಾಲ: ನೀವು ಗೊರಿಲ್ಲ ಮತ್ತು ವಿಜ್ಞಾನ ಒಂದು ಪ್ರಯೋಗದ ಕುರಿತು ನೋಡಿರಬಹುದು. ಅದೇನಪ್ಪಾ ಅಂತ ಅಂದ್ರೆ, ಗೊರಿಲ್ಲ ಮತ್ತು ಅದರ ಮರಿಯನ್ನು (ತಾಯಿ-ಮಗು) ಒಂದು ಖಾಲಿ ಟ್ಯಾಂಕಿನಲ್ಲಿಡಲಾಯಿತು.

Advertisement

ಸೊಂಟದಲ್ಲೇ ತನ್ನ ಮರಿಯನ್ನು ಇಟ್ಟುಕೊಂಡು ತಾಯಿ ಅದರೊಳಗೆ ಇತ್ತು. ಬಳಿಕ ವಿಜ್ಞಾನಿಗಳು ತಾಯಿಗೆ ಮಗುವಿನ ಮೇಲೆ ಇರುವ ಕಾಳಜಿಯನ್ನು ಪರೀಕ್ಷಿಸಲು ಟ್ಯಾಂಕಿಗೆ ನೀರು ತುಂಬಿದರು.

ನೀರು ಗೊರಿಲ್ಲದ ಸೊಂಟದವರೆಗೆ ತಲುಪಿತು. ಗೊರಿಲ್ಲ ಕ್ರಮೇಣ ಮಗುವನ್ನು ಎದೆ ಬಳಿ ತಬ್ಬಿಕೊಂಡಿತು. ಎದೆಯ ಬಳಿಗೂ ನೀರು ಬಂದಾಗ ಮಗುವನ್ನು ಎರಡೂ ಕೈಯಲ್ಲಿ ಎತ್ತಿ ಹಿಡಿಯಿತು. ನೀರು ತುಂಬುತ್ತಾ ಕುತ್ತಿಗೆ ಬಳಿ ಮತ್ತು ಇನ್ನೇನು ತಾನೇ ಮುಳುಗುತ್ತಿದ್ದೇನೆ ಎಂದೆನಿಸಿದಾಗ ಮಗುವನ್ನು ಕೆಳಕ್ಕೆ ಹಾಕಿ ಅದರ ಮೇಲೆ ನಿಂತು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಮುಂದಾಯಿತು. ಅಲ್ಲಿಗೆ ವಿಜ್ಞಾನಿಗಳಿಗೆ ಪ್ರಯೋಗದ ಫಲಿತಾಂಶ ಲಭಿಸಿತು.

ಇದಕ್ಕೂ ಕೋವಿಡ್ 19 ಏನು ಸಂಬಂಧ? ಚೀನದಿಂದ ವೈದ್ಯಕೀಯ ಸಲಕರಣೆ ಮತ್ತು ರಕ್ಷಣಾ ಕವಚವನ್ನು ಆಮದು ಮಾಡಿಕೊಂಡಿರುವ ಪಾಕಿಸ್ಥಾನವು, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರಿಗೆ ಯಾವುದೇ ಸೌಲಭ್ಯ ನೀಡದೇ ನಿರ್ಲಕ್ಷಿéಸುತ್ತಿದೆ.

ತನ್ನ ನೆಲ, ತನ್ನ ಜನರು ಎಂದು ವರ್ಷಪೂರ್ತಿ ಭಾರತದ ವಿರುದ್ಧ ಗಡಿ ತಗಾದೆ ತೆಗೆಯುವ ಪಾಕ್‌ ಈಗ ಪಿಒಕೆ ಜನರನ್ನು ಕಡೆಗಣಿಸತೊಡಗಿದೆ.

Advertisement

ರಾಜಕೀಯ ಮತ್ತು ಭಯೋತ್ಪಾದನೆ ದಾಳಿಯನ್ನು ಸಂಘಟಿಸಲು ಬಳಸಿಕೊಳ್ಳುವ ಪಾಕ್‌ಗೆ ಅಲ್ಲಿನ ಜನರನ್ನು ರಕ್ಷಿಸಿಕೊಳ್ಳಲು ಮನಸ್ಸಿಲ್ಲ. ತನಗೆ ಅಪಾಯ ಎದುರಾದಾಗ ತನ್ನ ಕಾಲಬುಡದಲ್ಲಿದ್ದವರನ್ನು ಮೆಟ್ಟಿ ತಾನು ಬದುಕಲು ಯತ್ನಿಸುತ್ತಿದೆ. ಪಾಕಿಸ್ಥಾನ ಸರಕಾರದ ಈ ನಡೆ ಪಿಒಕೆ ಜನರ ಕಣ್ಣನ್ನು ಕೆಂಪಗಾಗಿಸಿದೆ.

ಈ ಮಧ್ಯೆ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್‌(ಸಿಪಿಇಸಿ) ಕಾರ್ಯವು ಪಿಒಕೆ ಯಲ್ಲಿ ಮುಂದುವರೆದಿದೆ. ಚೀನದ 5 ಸಾವಿರ ಎಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲು ಖುಂಜೆರಾಬ್‌ ಪಾಸ್‌ ಅನ್ನು ಮತ್ತೆ ತೆರೆಯುವಂತೆ ಚೀನ ಕೋರಿದೆ.

ಪಂಜಾಬ್‌ ಪೂರ್ವ ಪ್ರಾಂತ್ಯ ಮತ್ತು ದೇಶದ ಉಳಿದ ಭಾಗಗಳಿಂದ ಕೋವಿಡ್ 19 ಪೀಡಿತ ಜನರನ್ನು ಪಿಒಕೆ ಯ ಮಿರ್ಪುರ್‌ನಗರಕ್ಕೆ ಸ್ಥಳಾಂತರಿಸಿದ್ದಕ್ಕಾಗಿ ಕಾಶ್ಮೀರಿ ರಾಜಕಾರಣಿಗಳು ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಯುನೈಟೆಡ್‌ ಕಾಶ್ಮೀರ ಪೀಪಲ್ಸ್ ನ್ಯಾಷನಲ್‌ ಪಾರ್ಟಿಯ ವಕ್ತಾರ ನಾಸಿರ್‌ಅಜೀಜ್‌ ಖಾನ್‌ ಪಿಒಕೆ ಯಲ್ಲಿ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಮಾಡಲೂ ಸೌಲಭ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲದಕ್ಕೂ ಚೀನ… ಚೀನ
ಚೀನ ಗಣಿಗಾರಿಕೆ ಮತ್ತು ವಿದ್ಯುತ್‌ ಯೋಜನೆಗಳ ಮೂಲಕ ಪಿಒಕೆ ಪ್ರದೇಶದಿಂದ ಹೆಚ್ಚಿನ ನೈಸರ್ಗಿಕ ಸಂಪನ್ಮೂಲಗಳನ್ನು ತೆಗೆಯಲು ಹವಣಿಸುತ್ತಿದೆ. ಪಾಕಿಸ್ಥಾನದಲ್ಲಿ ಪರಿಸ್ಥಿತಿ ಹದಗೆಟ್ಟರೆ, ಪಾಕ್‌ ಸಹಾಯ ಮಾಡಲು ಚೀನ ತನ್ನ ಪೀಪಲ್ಸ್ ಲಿಬರೇಶನ್‌ ಆರ್ಮಿ (ಪಿಎಲ್‌ಎ) ಯನ್ನು ನಿಯೋಜಿಸುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಹೀಗೆ ಅವಲಂಬನೆ ಹೆಚ್ಚಾದರೆ, ದೀರ್ಘಾವಧಿಯಲ್ಲಿ, ಚೀನ ಪಾಕಿಸ್ಥಾನವನ್ನು ತನ್ನ ಮತ್ತೂಂದು ಪ್ರಾಂತ್ಯವೆಂದು ಪರಿಗಣಿಸುವ ಸಾಧ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next