Advertisement

ಕೋವಿಡ್‌-19 ಹರಡಿದ ಚೀನದಿಂದಲೇ ಪರಿಹಾರದ ಬಿನ್ನಾಣ

09:29 AM Apr 02, 2020 | sudhir |

ಬೀಜಿಂಗ್‌: ಕೋವಿಡ್‌-19 ಸೋಂಕು ಹರಡುವ ಮೂಲಕ ಕುಖ್ಯಾತಿ ಪಡೆದ ಚೀನ ಇದೀಗ ತಾನೇ ಹುಟ್ಟಿ ಹಾಕಿದ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಬಿನ್ನಾಣ ತೋರುತ್ತಿದೆ.

Advertisement

ಅಲ್ಲಿನ ವಿಜ್ಞಾನಿಗಳ ತಂಡವು ಕೋವಿಡ್‌-19 ವೈರಸ್‌ನ ನಿರ್ಮೂಲನೆಗೆ ವಿಭಿನ್ನ ಮಾರ್ಗವನ್ನು ಅಭಿವೃದ್ಧಿ ಪಡಿಸಿದ್ದು, ಔಷಧಿಯೂ ಅಲ್ಲದ ಲಸಿಕೆಯೂ ಅಲ್ಲದ “ಹೊಸ ಅಸ್ತ್ರ’ವೊಂದನ್ನು ಸಿದ್ಧಪಡಿಸಿದೆ ಎಂದು ಗ್ಲೋಬಲ್‌ ಟೈಮ್ಸ್ ವರದಿ ಮಾಡಿದೆ.

ನ್ಯಾನೋ ತಂತ್ರಜ್ಞಾನದ ಮೊರೆ
ಚೀನ ವಿಜ್ಞಾನಿಗಳು ಕೋವಿಡ್‌-19 ಸೋಂಕಿನೊಂದಿಗೆ ಸೆಣಸಲು ನ್ಯಾನೋ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ನ್ಯಾನೋ ವಸ್ತುವೊಂದನ್ನು ಸಿದ್ಧಪಡಿಸಿರುವ ಚೀನದ ವಿಜ್ಞಾನಿಗಳು ಸೋಂಕುಕಾರಕ ವೈರಾಣುಗಳನ್ನು ನಿಷ್ಕ್ರಿಯಗೊಳಿಸಿ, ಹೀರಿಕೊಳ್ಳುವ ನ್ಯಾನೋ ಸಾಧನವನ್ನು ಅನ್ವೇಷಣೆ ಮಾಡುತ್ತಿದ್ದಾರೆ.

ಟ್ವೀಟ್‌ ಮೂಲಕ ಬಹಿರಂಗ
ಈ ಕುರಿತು ಗ್ಲೋಬಲ್‌ ಟೈಮ್ಸ್, ಕೋವಿಡ್‌-19 ವೈರಸ್‌ ಅನ್ನು ಎದುರಿಸಲು ಚೀನದ ವಿಜ್ಞಾನಿಗಳು ಹೊಸ ಅಸ್ತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದು ಶೇ.96.5 ರಿಂದ ಶೇ.99.9ರಷ್ಟು ಸಾಮರ್ಥ್ಯ ಹೊಂದಿದೆ” ಎಂದು ತನ್ನ ಟ್ವೀಟ್‌ರ್‌ ವಾಲ್‌ನಲ್ಲಿ ಬರೆದುಕೊಂಡಿದೆ.

ಎನ್‌.ಐ.ಹೆಚ್‌ ಅಭಿಪ್ರಾಯ
ನ್ಯಾನೋ ತಂತ್ರಜ್ಞಾನ “ಕ್ಯಾನ್ಸರ್‌’ ಕೋಶಗಳಂತಹ ಮತ್ತು ದೇಹದ ನಿರ್ದಿಷ್ಟ ಅಂಗಗಳನ್ನು ಅಥವಾ ಕೋಶಗಳನ್ನು ಗುರಿಯಾಗಿಸಬಲ್ಲ ವೈರಾಣುಗಳ ಕಂಡುಹಿಡಿಯುವಿಕೆಗೆ ಪರಿಣಾಮಕಾರಿ ಚಿಕಿತ್ಸೆ ಆಗಿದೆ ಎಂದು ನ್ಯಾನೋ ತಂತ್ರಜ್ಞಾನ ಹೆಚ್ಚು ಉಪಕಾರಿ ಎಂದು ಎನ್‌.ಐ.ಹೆಚ್‌ ತಿಳಿಸಿದೆ.
ಇನ್ನೂ ಉತ್ಪಾದನಾ ವಲಯಗಳಾದ ಬಣ್ಣಗಳು, ಫಿಲ್ಟರ್‌ಗಳು, ಲೂಬ್ರಿಕೆಂಟ್‌ ಸೇರಿದಂತೆ ವಿವಿಧ ಉತ್ಪಾದನಾ ಪ್ರಕ್ರಿಯೆಗಳಲ್ಲಿ ನ್ಯಾನೋ ಸಾಧನಗಳನ್ನು ಬಳಸಲಾಗುತ್ತದೆ. ಆರೋಗ್ಯ ವಲಯದಲ್ಲಿ ನ್ಯಾನೋಝೈಮ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next