Advertisement

ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ; ಒಮಿಕ್ರಾನ್ ಏರಿಕೆ

08:29 PM Jan 10, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸ ಕೋವಿಡ್-19 ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆಯಾಗಿದ್ದು, 11,698 ಪ್ರಕರಣಗಳು ದೃಢಪಟ್ಟಿದ್ದು 4 ಸಾವುಗಳು ದಾಖಲಾಗಿವೆ, ಇದುವರೆಗೆ ರಾಜ್ಯದಲ್ಲಿ ಒಟ್ಟು 30,63,656 ಪ್ರಕರಣಗಳು ದೃಢ ಪಟ್ಟಿದ್ದು, ಸಾವಿನ ಸಂಖ್ಯೆ 38,374 ಕ್ಕೆ ತಲುಪಿದೆ.

Advertisement

ಡಿಸೆಂಬರ್‌ನಿಂದ ರಾಜ್ಯವು ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆಯನ್ನು ಕಾಣುತ್ತಿದ್ದು, ಭಾನುವಾರ 12,000 ದೈನಂದಿನ ಪ್ರಕರಣಗಳು ವರದಿಯಾಗಿದ್ದವು. ಸೋಮವಾರದ ಹೊಸ ಪ್ರಕರಣಗಳಲ್ಲಿ 9,221 ಪ್ರಕರಣಗಳು ಬೆಂಗಳೂರು ನಗರದಿಂದ ಬಂದಿದ್ದು, 829 ಜನರನ್ನು ಬಿಡುಗಡೆ ಮಾಡಲಾಗಿದ್ದು, ನಗರದಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯಾದ್ಯಂತ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 60,148 ಆಗಿದೆ. 1,148 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,65,105 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.

ಇದನ್ನೂ ಓದಿ :ಬೆಂಗಳೂರಿನಲ್ಲಿ ಒಮಿಕ್ರಾನ್ ಹೆಚ್ಚಳ: ಸೋಂಕಿತರ ಸಂಖ್ಯೆ 479 ಕ್ಕೆ

ದಿನದ ಪಾಸಿಟಿವಿಟಿ ರೇಟ್ 7.77 ಪ್ರತಿಶತದಷ್ಟಿದ್ದರೆ, ಪ್ರಕರಣದ ಸಾವಿನ ಪ್ರಮಾಣ (CFR) 0.03 ಶೇಕಡಾ ಇದೆ.

Advertisement

ನಾಲ್ಕು ಸಾವುಗಳಲ್ಲಿ ಬೆಂಗಳೂರು ನಗರದಿಂದ ಇಬ್ಬರು ಮತ್ತು ಮೈಸೂರು ಮತ್ತು ರಾಮನಗರದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರ ಹೊರತುಪಡಿಸಿ, ಮೈಸೂರು 309 ಹೊಸ ಪ್ರಕರಣಗಳಲ್ಲಿ ಎರಡನೇ ಅತಿ ಹೆಚ್ಚು, ಮಂಡ್ಯ 306, ಉಡುಪಿ 219, ದಕ್ಷಿಣ ಕನ್ನಡ 176, ಹಾಸನ 171, ನಂತರದ ಸ್ಥಾನದಲ್ಲಿದೆ.

ಸೋಮವಾರ 1,50,479 ಮಾದರಿಗಳನ್ನು ಪರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next