Advertisement

ತಾಪಮಾನ ಏರಿಕೆಯಿಂದಾಗಿ ಹಿಮಪರ್ವತಕ್ಕೆ ಟಾರ್ಪಲಿನ್‌ ಹೊದಿಕೆ ಮುಚ್ಚಿದ ಇಟಲಿ

08:31 PM Jun 22, 2020 | Sriram |

ರೋಮ್‌: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮ ಕರಗುವುದನ್ನು ತಡೆಯಲು ಇಟಲಿ ಹಿಮ ಪರ್ವತಕ್ಕೆ ಬೃಹತ್‌ ಟಾರ್ಪಲಿನ್‌ ಹೊದಿಕೆ ಮುಚ್ಚಿದೆ.

Advertisement

ಪ್ರಸೆನ್ನಾ ಗ್ಲೇಸಿಯರ್ ನ ಪರ್ವತಕ್ಕೆ 1 ಲಕ್ಷ ಚ.ಕಿ.ಮೀ. ವಿಸ್ತೀರ್ಣದ ಬೃಹತ್‌ ಟಾರ್ಪಲಿನ್‌ ಹೊದಿಸಲಾಗಿದೆ. ಈ ಹೊದಿಕೆಯು ಬಾಹ್ಯ ತಾಪಮಾನಕ್ಕಿಂತ ಕಡಿಮೆ ಉಷ್ಣಾಂಶವನ್ನು ಕಾಯ್ದುಕೊಳ್ಳುತ್ತದೆ.

ಟಾರ್ಪಲಿನ್‌ನ ಹಲವು ತುಂಡು ಹೊದಿಕೆಗಳನ್ನು ಒಟ್ಟಿಗೆ ಹೊಲಿದು ಹಾಸಿ, ಅವುಗಳ ಮೇಲೆ ಮರಳಿನ ಚೀಲಗಳನ್ನು ಇಡಲಾಗಿದೆ. ಸೆಪ್ಟೆಂಬರ್‌ ವೇಳೆಗೆ ಇದನ್ನು ತೆಗೆಯಲಾಗುತ್ತದೆ.

ಜಾಗತಿಕ ತಾಪಮಾನದಿಂದಾಗಿ ಈ ಪರ್ವತ‌ದಲ್ಲಿ 1993ರಿಂದ 3ನೇ 1 ಭಾಗದಷ್ಟು ಹಿಮ ಕರಗಿದೆ. ಸ್ಕೀಯಿಂಗ್‌ಗೆ ಪ್ರಸಿದ್ಧಿ ಪಡೆದಿರುವ ಈ ಭೂಪ್ರದೇಶವನ್ನು ಬೇಸಿಗೆ ಸಮಯದಲ್ಲಿ ಇಟಲಿ ಆಗಾಗ್ಗೆ ಟಾರ್ಪಲಿನ್‌ನಿಂದ ಮುಚ್ಚುತ್ತಿರುತ್ತದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next