ಹೊಸದಿಲ್ಲಿ: ಮೊತ್ತಮೊದಲ ದೇಶೀಯ ಕೋವಿಡ್ ಲಸಿಕೆ ಕೊವಾಕ್ಸಿನ್‌ನನ್ನು ಮಾನವನ ಮೇಲೆ ಪ್ರಯೋಗಿಸುವ ಮೊದಲ ಹಂತದ ಆರಂಭಿಕ ಭಾಗವನ್ನು ಹರಿಯಾಣದ ರೋಹrಕ್‌ನ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ (ಪಿಜಿಐ)ಯು ಪೂರ್ಣ ಗೊಳಿಸಿದೆ. ಪರೀಕ್ಷೆ ಯಲ್ಲಿ ಭರವಸೆಯ ಮತ್ತು ಉತ್ತೇಜನಕಾರಿ ಫಲಿತಾಂಶ ದೊರೆ ತಿರುವು ದಾಗಿ ಸಂಸ್ಥೆ ಹೇಳಿಕೊಂಡಿದೆ.
ಕೊವಾಕ್ಸಿನ್‌ನ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ಪೂರ್ಣಗೊಳ್ಳಲು ಒಂದು ವರ್ಷ ಮೂರು ತಿಂಗಳು ಬೇಕಾಗ ಬಹುದು ಎಂದು ಸಿಟಿಆರ್‌ಐ (ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ ಆಫ್ ಇಂಡಿಯಾ) ಹೇಳಿದೆ.
ಮೊದಲ ಹಂತದ ಪ್ರಯೋಗದ ಆರಂಭಿಕ ಭಾಗವನ್ನು ಜು. 17ರಂದು ಆರಂಭಿಸಲಾಗಿತ್ತು. 50 ಮಂದಿಯ ಮೇಲೆ ಲಸಿಕೆ ಯನ್ನು ಪ್ರಯೋಗಿಸಲಾಗಿತ್ತು. ಈಗ ಮೊದಲ ಹಂತದ ಎರಡನೇ ಭಾಗ ಆರಂಭವಾಗಿದ್ದು, 6 ಮಂದಿಯ ಮೇಲೆ ಪ್ರಯೋಗಿಸಲಾಗಿದೆ ಎಂದು ಲಸಿಕೆ ಪ್ರಯೋಗ ತಂಡದ ಪ್ರಧಾನ ತನಿಖಾಧಿಕಾರಿ ಡಾ| ಸವಿತಾ ವರ್ಮಾ ಹೇಳಿದ್ದಾರೆ. ಇತ್ತೀಚೆಗಷ್ಟೇ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ 30 ವರ್ಷದ ವ್ಯಕ್ತಿಯ ಮೇಲೆ ಕೊವಾಕ್ಸಿನ್ ಮೊದಲ ಡೋಸ್ ಪ್ರಯೋಗಿಸಲಾಗಿತ್ತು. 2 ವಾರಗಳ ಕಾಲ ಆ ವ್ಯಕ್ತಿಯ ಮೇಲೆ ನಿಗಾ ಇರಿಸಿ, ಅನಂತರ ಎರಡನೇ ಡೋಸ್ ಪ್ರಯೋಗಿಸಲಾಗುತ್ತದೆ ಎಂದು ಏಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್) ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಜತೆ ಸೇರಿ ಕೊವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.