ರಾಮನಗರ: ಜಿಲ್ಲೆ ಯಲ್ಲಿ ಕೊವ್ಯಾಕ್ಸಿನ್ ಕೇವಲ 10 ಡೋಸ್‌ಗಳಿದ್ದು, ಎರಡನೇ ಡೋಸ್ ಪಡೆ ಯಲು 17,120 ಮಂದಿ ಕಾಯುತ್ತಿ ದ್ದಾರೆ. ರಾಮ ನಗರ ಜಿಲ್ಲೆಗೆ ಕೊವ್ಯಾಕ್ಸಿನ್‌ಗಿಂತ ಕೋವಿ ಶೀಲ್ಡ್ ಲಸಿಕೆಗಳೇ ಹೆಚ್ಚಾಗಿ ಪೂರೈ ಕೆಯಗಿದ್ದು, ಈ ಲಸಿಕೆಯ ಪ್ರಮಾಣ ಸದ್ಯ ಕೇವಲ 8000 ಡೋಸ್‌ಗಳಿವೆ. ರಾಮ ನಗರ ಜಿಲ್ಲೆಗೆ ಈವರೆಗೆ 23900 ಕೊವ್ಯಾಕ್ಸಿನ್ ಡೋಸ್‌ಗಳು ಬಂದಿವೆ. ಎಲ್ಲಾ ವಿತರಣೆಯಾಗಿ 10 ಡೋಸ್‌ಗಳು ಬಾಕಿ ಉಳಿ ದಿವೆ. 17120 ಮಂದಿ ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಅಗತ್ಯವಿರುವ ಡೋಸ್‌ಗಳನ್ನು ಪೂರೈಸುವಂತೆ ಜಿಲ್ಲಾಡಳಿತ ಈಗಾ ಗಲೆ ಸರ್ಕಾರದಗಮನ ಸೆಳೆದಿದೆ.
ಒಂದೆ ರೆಡು ದಿನಗಳಲ್ಲಿ ಈ ವ್ಯಾಕ್ಸಿನ್ ಪೂರೈ ಸುವ ವಿಶ್ವಾಸ ಜಿಲ್ಲಾಡಳಿತ ವ್ಯಕ್ತಪಡಿಸಿದೆ. ಎರಡನೇ ಡೋಸ್ ಪಡೆಯಲು ಇನ್ನುಸಮಯ ಇರುವುದರಿಂದ ಆತಂಕ ಪಡುವ ಅವ ಶ್ಯ ಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಶೀಲ್ಡ್ ಲಸಿಕೆ: ಜಿಲ್ಲೆಗೆ ಈವ ರೆಗೆ 194450 ಡೋಸ್‌ಗಳು ಪೂರೈಕೆಯಾಗಿವೆ. ಮೊದಲನೆ, ಎರ ಡನೆ ಡೋಸ್‌ಗಳ ನಂತರ ಸದ್ಯ ಕೇವಲ 8000ಡೋಸ್‌ಗಳ ದಾಸ್ತಾನು ಮಾತ್ರ ಇದೆ. ಇನ್ನು 132084 ಮಂದಿಗೆ 2ನೇಡೋಸ್‌ಗೆ ಲಸಿಕೆ ಬೇಕಾ ಗಿದೆ.
ಮೊದಲ ಡೋಸ್ ಎಷ್ಟು ಯಶಸ್ಸು?: ಜಿಲ್ಲೆ ಯಲ್ಲಿ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಕೊಡುವ ವಿಚಾ ರ ದಲ್ಲಿ ಮೇ 5ರ ಅಂಕಿ ಅಂಶದಪ್ರಕಾರ ಶೇ 55 ಸಾಧ ನೆ ಯಾ ಗಿದೆ. 45 ವರ್ಷ ಮೇಲ್ಪಟ್ಟ ವಯೋಮಾನದ1,95,366 ಮಂದಿಯ ಪೈಕಿ 80,653 ಮಂದಿಗೆ ಮೊದ ಲನೆ ಡೋಸ್‌ಲಸಿಕೆ ಸಿಕ್ಕಿದ್ದು ಶೇ 41 ಸಾಧ ನೆ ಯಾ ಗಿದೆ. 60 ವರ್ಷ ಮೇಲ್ಪಟ್ಟ 1,12,593ಮಂದಿಯ ಪೈಕಿ 88,375 ಮಂದಿಗೆ ಮೊದಲ ಡೋಸ್ ಕೊಡ ಲಾ ಗಿದ್ದುಈ ವರ್ಗ ದಲ್ಲಿ ಶೇ 78 ಸಾಧ ನೆ ಯಾ ಗಿದೆ.
ಎರಡನೇ ಡೋಸ್ ಎಷ್ಟು ಯಶಸ್ಸು?: ಮೇ 5 ಅಂಕಿ ಅಂಶದ ಪ್ರಕಾರಜಿಲ್ಲೆ ಯಲ್ಲಿ 45 ರಿಂದ 60 ವರ್ಷ ವಯೋ ಮಾ ನದ 51,542 ಮಂದಿಯಪೈಕಿ 8936 ಮಂದಿಗೆ ಎರ ಡನೇ ಡೋಸ್ ಲಸಿಕೆ ಸಿಕ್ಕಿದೆ. ಶೇ 20 ಸಾಧ ನೆಯಾ ಗಿದೆ. 60 ವರ್ಷ ಮೇಲ್ಪಟ್ಟ ವಯೋ ಮಾ ನ 74,033 ಮಂದಿಯಪೈಕಿ 15,857 ಮಂದಿಗೆ ಎರ ಡನೇ ಡೋಸ್ ಲಸಿಕೆ ಸಿಕ್ಕಿದ್ದು ಶೇ. 21 ಸಾಧನೆ ಯಾ ಗಿದೆ.