Advertisement

ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ಮನವಿ

09:38 PM Nov 06, 2021 | Team Udayavani |

ವಾಷಿಂಗ್ಟನ್‌: ಭಾರತದಲ್ಲಿ ಕೊವ್ಯಾಕ್ಸಿನ್‌ ಲಸಿಕೆ ತಯಾರಿಸುತ್ತಿರುವ “ಭಾರತ್‌ ಬಯೋಟೆಕ್‌’ನ ಸಹಭಾಗಿ ಕಂಪನಿಯಾದ ಅಮೆರಿಕದ ಆಕ್ಯುಜೆನ್‌ ಇಂಕ್‌, ಎಳೆಯರಿಗೆ ಕೊವ್ಯಾಕ್ಸಿನ್‌ ಲಸಿಕೆ ಬಳಸಲು ಅನುಮತಿ ಕೋರಿ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

Advertisement

“ಯು.ಎಸ್‌. ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ’ಗೆ (ಎಫ್ಡಿಎ) ಸಲ್ಲಿಸಿರುವ ಮನವಿಯಲ್ಲಿ, ಅಮೆರಿಕದ 2ರಿಂದ 18 ವರ್ಷದವರೆಗಿನವರಿಗೆ ಕೊವ್ಯಾಕ್ಸಿನ್‌ ಲಸಿಕೆಯನ್ನು ತುರ್ತು ಪರಿಸ್ಥಿತಿಗಳಲ್ಲಿ ಬಳಸಲು ಅನುಮತಿ ನೀಡುವಂತೆ ಕೋರಲಾಗಿದೆ.

ಭಾರತದಲ್ಲಿ ಈ ಲಸಿಕೆಯನ್ನು ಮಕ್ಕಳ ಮೇಲೆ ಮೂರು ಹಂತಗಳಲ್ಲಿ ಪರೀಕ್ಷೆಗೊಳಿಸಲಾಗುತ್ತಿದ್ದು, ಅವುಗಳಲ್ಲಿ 2 ಹಂತಗಳು ಮುಕ್ತಾಯವಾಗಿವೆ. 256 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು ಅವರಲ್ಲಿ ಕೊರೊನಾ ಹಿಮ್ಮೆಟ್ಟಿಸುವ ಪ್ರಮಾಣದ ಪ್ರತಿಕಾಯಗಳು ಸೃಷ್ಟಿಯಾಗಿರುವುದು ಖಾತ್ರಿಯಾಗಿದೆ. ಹಾಗಾಗಿ, ಅಮೆರಿಕದಲ್ಲಿ ಇದರ ತುರ್ತು ಬಳಕೆಗೆ ಅವಕಾಶ ಕಲ್ಪಿಸಬೇಕೆಂದು ಕೋರಲಾಗಿದೆ.

ಇದನ್ನೂ ಓದಿ:ಪಂಜಾಬ್‌ನಲ್ಲಿ ನಿಲ್ಲದ ಸಿಧು ತೊಳಲಾಟ ಈಗ ಎ.ಜಿ. ವಿಚಾರದಲ್ಲಿ ಮುನಿಸು

Advertisement

Udayavani is now on Telegram. Click here to join our channel and stay updated with the latest news.

Next