Advertisement

ನ್ಯಾಯಾಲಯ ಕಲಾಪ ಆರಂಭ

07:01 AM Jun 02, 2020 | mahesh |

ಭದ್ರಾವತಿ: ಕೋವಿಡ್ ಲಾಕ್‌ ಡೌನ್‌ನಿಂದಾಗಿ ಬಹುತೇಕ ಸ್ಥಗಿತಗೊಂಡಂತಿದ್ದ ಮುಕ್ತ ನ್ಯಾಯಾಲಯದ ಕಾರ್ಯಕಲಾಪಗಳು ಸೋಮವಾರದಿಂದ ಕೆಲವು
ಷರತ್ತುಬದ್ಧ ಬದಲಾವಣೆಗಳೊಂದಿಗೆ ತೆರಯಲ್ಪಟ್ಟಿತು. ನ್ಯಾಯಾಲಯದ ಆವರಣದೊಳಗೆ ನ್ಯಾಯಾಧೀಶರ ವಾಹನಗಳನ್ನು ಹೊರತುಪಡಿಸಿ ನ್ಯಾಯವಾದಿಗಳ
ವಾಹನ ನಿಲುಗಡೆಗೆ ಅವಕಾಶವಿರದ ಕಾರಣ ನ್ಯಾಯವಾದಿಗಳು ತಮ್ಮ ವಾಹನಗಳನ್ನು ನ್ಯಾಯಾಲಯದ ಹೊರಗಿನ ರಸ್ತೆಬದಿ ನಿಲ್ಲಿಸಿದ್ದರು.

Advertisement

ಅರ್ಜಿ ಸಲ್ಲಿಕೆಗೆ ಹೊಸ ವಿಧಾನ: ನ್ಯಾಯಾಲಯದ ಕಟ್ಟಡದ ಪ್ರವೇಶ ದ್ವಾರದ ಬಳಿ ವಕೀಲರಿಗೆ ಅರ್ಜಿ ಸಲ್ಲಿಕೆ, ಶುಲ್ಕ ಸಲ್ಲಿಕಾ ಅರ್ಜಿ ಇತ್ಯಾದಿಗಳನ್ನು ಸಲ್ಲಿಸಲು ಪ್ರತ್ಯೇಕವಾದ ಕೌಂಟರ್‌ಗಳನ್ನು ತೆರೆದು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ನ್ಯಾಯಾಲಯದೊಳಗೆ ನ್ಯಾಯಾಧೀಶರು, ಸಿಬ್ಬಂದಿಗಳಿಗೆ, ವಕೀಲರಿಗೆ ಮಾತ್ರ ಸ್ಕ್ರೀನ್‌ ಟೆಸ್ಟಿಂಗ್‌ ಮಾಡಿಸಿಕೊಂಡು ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ಕೇವಲ ವಾದಮಂಡನೆ ಮಾತ್ರ: ಸದ್ಯಕ್ಕೆ ನ್ಯಾಯಾಲಯದಲ್ಲಿ ಕಕ್ಷೀದಾರರಿಗೆ ಪ್ರವೇಶವಿರದ ಕರಣ ನ್ಯಾಯಾಲಯದಲ್ಲಿ ವಾದಮಂಡನೆಗೆಂದು ಇದ್ದ ಪ್ರಕರಣಗಳನ್ನು ಮಾತ್ರ ಪರಿಗಣಿಸಿ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿದೆ.

ಕೋಟ್‌ ಅಗತ್ಯವಿಲ್ಲ: ನ್ಯಾಯಾಲಯದಲ್ಲಿ ವಕೀಲರು ಕೋಟ್‌ ಧರಿಸದೆ ಕೇವಲ ಬ್ಯಾಂಡ್‌ ಕಟ್ಟಿಕೊಂಡು ವಾದ ನಡೆಸಲು ಅವಕಾಶ ನೀಡಲಾಗಿದೆ.

ಕಕ್ಷೀದಾರರಗೆ ಪ್ರವೇಶವಿಲ್ಲ: ನ್ಯಾಯಾಲಯದ ಒಳಗೆ ಯಾವುದೇ ಕಕ್ಷಿದಾರರಿಗೆ ಪ್ರವೇಶವಿರದ ಕಾರಣ ಸಾಮಾನ್ಯವಾಗಿ ಲಾಕ್‌ಡೌನ್‌ ಪೂರ್ವದಲ್ಲಿ ಪ್ರತಿನಿತ್ಯ ಕಕ್ಷೀದಾರರು, ವಕೀಲರಿಂದ ತುಂಬಿ ತುಳುಕುತ್ತಿದ್ದ ನ್ಯಾಯಾಲಯದ ಕಾರಿಡಾರ್‌ಗಳು ಕಕ್ಷೀದಾರರಿಲ್ಲದೆ ಬಿಕೋ ಎನ್ನುತ್ತಿದ್ದವು.

Advertisement

ಗೇಟ್‌ ಹೊರಗೆ ಕಕ್ಷೀದಾರರು: ನ್ಯಾಯಾಲಯದ ಆವರಣದೊಳಗೆ ಕಕ್ಷೀದಾರರಿಗೆ ಪ್ರವೇಶಿಸಲು ಅವಕಾಶವಿರದಿದ್ದ ಕಾರಣ ನ್ಯಾಯಾಲಯದಲ್ಲಿರುವ ತಮ್ಮ ವಿವಿಧ ಪ್ರಕರಣಗಳ ನಿಮಿತ್ತ ಬಂದಿದ್ದ ಅನೇಕ ಕಕ್ಷೀದಾರರು ನ್ಯಾಯಾಲಯದ ಗೇಟಿನ ಹೊರಗೆ ನಿಂತು ತಮ್ಮ ತಮ್ಮ, ವಕೀಲರ ಮೂಲಕ ಮಾಹಿತಿ ಪಡೆಯುತ್ತಿದ್ದದ್ದು ಕಂಡುಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next