ನವದೆಹಲಿ: ಐಎನ್ಎಕ್ಸ್ ಮಾಧ್ಯಮ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸಿಬಿಐ ಸಿದ್ಧಪಡಿಸಿದ ದಾಖಲೆ ಪತ್ರಗಳನ್ನು ನೋಡಲು ಅವಕಾಶ ಸಿಗಲಿದೆ.
ಈ ಬಗ್ಗೆ ಕೆಳಹಂತದ ಕೋರ್ಟ್ ಮಾ.5ರಂದು ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದೆ.
ಕೆಳಹಂತದ ಕೋರ್ಟ್ ಮಾ.5ರಂದು ಆದೇಶ ನೀಡಿ, ಕಾಂಗ್ರೆಸ್‌ನ ಹಿರಿಯ ಮುಖಂಡ, ಅವರ ಪುತ್ರ ಮತ್ತು ಇತರರಿಗೆ ಸಿಬಿಐ ಸಿದ್ಧಪಡಿಸಿದ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಡಬೇಕು ಎಂದು ಆದೇಶ ನೀಡಿತ್ತು.
ಇದನ್ನೂ ಓದಿ:ದುಷ್ಕರ್ಮಿಗಳಿಂದ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಮತ್ತು ಸಹೋದರನ ಗುಂಡಿಕ್ಕಿ ಹತ್ಯೆ
ಸಿಬಿಐ ಈ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೇ 18ರಂದು ಕೆಳಹಂತದ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.