ಮೈಸೂರು: ಮೈಮುಲ್ ಆಯ್ಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆ ನೀಡಿದ್ದಲ್ಲದೇ ಸರ್ಕಾರಕ್ಕೆ ಮಾಹಿತಿ ಕೇಳಿ ನೋಟಿಸ್ ಜಾರಿ ಮಾಡಿದೆ. ಯಾವುದೇ ಆಯ್ಕೆ ಪ್ರಕ್ರಿಯೆ ಮಾಡುವಾಗ ನ್ಯಾಯಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿದೆ. ಇದು ನಮ್ಮ ಹೋರಾಟಕ್ಕೆ ನ್ಯಾಯಾಲಯದಲ್ಲಿ ಸಿಕ್ಕ ಜಯ ಎಂದು ಶಾಸಕ ಸಾ.ರಾ.ಮಹೇಶ್ ಸಂತಸ ವ್ಯಕ್ತಪಡಿಸಿದರು.
ಈಗಲಾದರೂ ಸರ್ಕಾರ ಆಯ್ಕೆ ಪ್ರಕ್ರಿಯೆ ಮಾಡಿದ್ದ ಸಂಸ್ಥೆಯ ವಿರುದ್ಧ ಪ್ರಕರಣ ದಾಖ ಲಿಸಬೇಕು. ಸಹಕಾರ ಸಚಿವರು ಯಾರ ಒತ್ತಡಕ್ಕೂ ಮಣಿಯದೆ, ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಪರೀಕ್ಷೆ ನಡೆಸಿ ಮೌಲ್ಯ ಮಾಪನ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯಾದ್ಯಂತ ಹೋರಾಟ: ನಮ್ಮ ಹೋರಾಟ ಮೈಸೂ ರಿನ ಮಟ್ಟಕ್ಕೆ ಮಾತ್ರವಲ್ಲ. ಇಡೀ ರಾಜ್ಯದ ಸಹಕಾರಿ ಕ್ಷೇತ್ರ ದಲ್ಲಿ ನಡೆಯುತ್ತಿರುವ ಅವ್ಯವಹಾರದ ವಿರುದ್ಧ. ಮೈಸೂ ರಿನಲ್ಲಿ ಅಕ್ರಮ ಮಾಡಿದ್ದಾರೆ ಎಂದು ಅಬಕಾರಿ ಎಸ್ಪಿ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ಅವರನ್ನು ಚಾಮ ರಾಜನಗರಕ್ಕೆ ವರ್ಗಾವಣೆ ಮಾಡಿದ್ದೇಕೆ? ಹಾಗಾದರೆ ಮೈಸೂರಿನಲ್ಲಿ ಅವ್ಯವಹಾರಗಳು ನಡೆಯಬಾರದು, ಚಾಮ ರಾಜನಗರದಲ್ಲಿ ನಡೆಯಬಹುದಾ? ಇಷ್ಟಾದ ಮೇಲೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣವೇನು? ಎಂದು ಪ್ರಶ್ನಿಸಿದರು.
ಎಚ್.ವಿಶ್ವನಾಥ್ ವಿರುದ್ಧ ವಾಕ್ಸಮರ: ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ವಿಶ್ವ ನಾಥ್, ಕಾಂಗ್ರೆಸ್ನಲ್ಲಿದ್ದಾಗ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಸೂಕ್ಷ್ಮ ಸಮಾಜಗಳಿಗೆ ನೀವು ಎಂಎಲ್ಸಿ ಸ್ಥಾನ ಕೊಡಬೇಕು ಎಂದಿದ್ದರು. ಈ ಮಾತನ್ನು ಈಗ ಏಕೆ ಮರೆತಿದ್ದೀರಿ? ತಾವು ಸೂಕ್ಷ್ಮ ಸಮಾಜದವರೇ ಎಂದು ಪ್ರಶ್ನಿ ಸಿದ ಅವರು, ಅವರ ಮಗ ಜಿಪಂ ಸದಸ್ಯ.
ಅವರು ಯಾವ ಪಕ್ಷದಿಂದ ಗೆದ್ದಿದ್ದು? ಕೊಳಕು ಮನುಸ್ಸು, ದೇಹ, ಚಿಂತನೆ ಯಾರದ್ದು ಅಂತ ಜಿಲ್ಲೆಯ ಜನ ತೀರ್ಮಾನ ಮಾಡುತ್ತಾರೆ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು. ಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ, ಜೆಡಿಎಸ್ ಮುಖಂಡರಾದ ನರಸಿಂಹಮೂರ್ತಿ, ನಾಗರಾಜ್, ವಿವೇ ಕಾನಂದ, ಬೀರಿಹುಂಡಿ ಬಸವಣ್ಣ, ನಗರಪಾಲಿಕೆ ಸದಸ್ಯ ರಾದ ಎಸ್‌ಬಿಎಂ ಮಂಜು ಇತರರಿದ್ದರು.