Advertisement

Court ತನಿಖೆಗೆ ನ್ಯಾಯಾಲಯ ಆದೇಶ: ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ ವಂಚನೆ

10:51 PM Oct 24, 2023 | Team Udayavani |

ಉಡುಪಿ: ಬ್ರಹ್ಮಾವರದ ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗುಜರಿ ಮಾರಾಟದಲ್ಲಿ 14 ಕೋ.ರೂ.ಗೂ ಮಿಕ್ಕಿ ವಂಚನೆ ಮಾಡಿರುವ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಕೋರಿ ಉಡುಪಿ ಜಿಲ್ಲಾ ರೈತ ಸಂಘ ನೀಡಿದ ಖಾಸಗಿ ದೂರನ್ನು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಜೆಎಂಎಫ್ಸಿ ಉಡುಪಿ ಇವರು ದಾಖಲಿಸಿಕೊಂಡಿದ್ದಾರೆ.

Advertisement

ದೂರಿನ ವಿಚಾರಣೆ ನಡೆಸಿದ ನ್ಯಾಯಧೀಶರು ಈ ದೂರಿನ ಕುರಿತು ಸೂಕ್ತ ತನಿಖೆ ನಡೆಸಿ ಡಿ. 12ರೊಳಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಪಿಎಸ್‌ಐ ಅವರಿಗೆ ಅ. 21ರಂದು ಆದೇಶಿಸಿದ್ದಾರೆ.

ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್‌ ಕಿಣಿ ಅವರು ಸಂಘದ ಪರವಾಗಿ ದೂರು ದಾಖಲಿಸಿದ್ದು, ಪ್ರತಿವಾದಿಗಳಾಗಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರವೀಣ್‌, ಲಕ್ಷ್ಮೀನಾರಾಯಣ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್‌ ಶೆಟ್ಟಿ ಸೇರಿದಂತೆ 24 ಮಂದಿಯನ್ನು ಹೆಸರಿಸಲಾಗಿದೆ. ಇದರಲ್ಲಿ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಹಾಗೂ ಸದ್ಯ ಅಲ್ಲಿ ದುಡಿಯುತ್ತಿರುವ ನೌಕರರು ಸೇರಿದ್ದಾರೆ. ವಕೀಲ ಆರ್‌. ಜಗನಾಥ್‌ ಅವರು ರೈತ ಸಂಘದ ಪರವಾಗಿ ವಾದ ಮಂಡಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next