Advertisement
2017ರ ಅ. 18ರಂದು ಟೆಂಪೋ ವಾಹನ ಚಾಲಕ ಉಮೇಶ್ ಪೂಜಾರಿ (30) ಅವರು ಹೇರೂರು ಗ್ರಾಮದ ಮಂಜುನಾಥ ಪೆಟ್ರೋಲ್ ಬಂಕ್‌ನಿಂದ ಸ್ವಲ್ಪ ಮುಂದೆ ರಾ.ಹೆ. 66ರಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಟೆಂಪೋ ಚಲಾಯಿಸಿಕೊಂಡು ಬಂದು ಬಿ. ರಮಾನಂದ ರಾವ್ ಅವರು ಹೋಗುತ್ತಿದ್ದ ಸೈಕಲ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದರು.ಪರಿಣಾಮ ರಮಾನಂದ ರಸ್ತೆಗೆ ಬಿದ್ದು, ತೀವ್ರ ತರಹದ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದರು. ಈ ಬಗ್ಗೆ ಉಡುಪಿ-ಬ್ರಹ್ಮಾವರ ಠಾಣೆಯ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.