Advertisement

ಮಸ್ಕಿಗೆ ನ್ಯಾಯಾಲಯ ಮಂಜೂರು

03:54 PM Apr 10, 2019 | Team Udayavani |

ಮಸ್ಕಿ: ಕಕ್ಷಿದಾರರ ಅನುಕೂಲಕ್ಕಾಗಿ ನೂತನ ತಾಲೂಕು ಮಸ್ಕಿ ಪಟ್ಟಣಕ್ಕೆ ನ್ಯಾಯಾಲಯ ಮಂಜೂರಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ್‌ ಹೇಳಿದರು.

Advertisement

ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನೂತನ ತಾಲೂಕಿನ ಭೌಗೋಳಿಕ ಗಡಿಗಳನ್ನು ಗುರುತಿಸಿದ್ದು, ನೂತನ ನ್ಯಾಯಾಲಯ ಸ್ಥಾಪನೆಗೆ ಮಂಜೂರಾತಿ ದೊರೆತಿದೆ
ಎಂದರು.

ಲಿಂಗಸಗೂರು, ಮಾನ್ವಿ, ಸಿಂಧನೂರು ತಾಲೂಕಿನ ಕೆಲ ಗ್ರಾಮಗಳನ್ನು ಒಳಗೊಂಡ ನೂತನ ಮಸ್ಕಿ ತಾಲೂಕಿನ ಜನತೆಗೆ
ಅನುಕೂಲಕ್ಕಾಗಿ ಶೀಘ್ರ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್‌ಗೆ ಮಾಹಿತಿ ಕಳುಹಿಸಲಾಗುವುದು. ಪಟ್ಟಣದ ಸಿಂಧನೂರು ರಸ್ತೆಯಲ್ಲಿನ ಎಪಿಎಂಸಿ ಕಟ್ಟಡವನ್ನು ತಾತ್ಕಾಲಿಕ ನ್ಯಾಯಾಲಯ
ಸ್ಥಾಪನೆಗಾಗಿ ಗುರುತಿಸಲಾಗಿದೆ. ಈ ಸಂಬಂಧ ಎಪಿಎಂಸಿ ಆಡಳಿತ ಮಂಡಳಿಯಿಂದ ಪರವಾನಗಿಗೆ ಸಂಬಂಧಿಸಿದಂತೆ ಠರಾವು ಪತ್ರ ಪಡೆದು ಹೈಕೋರ್ಟ್‌ಗೆ ಕಳುಹಿಸಿಕೊಡಲಾಗುವುದು ಎಂದರು.

ನ್ಯಾಯಾಲಯ ಸ್ಥಾಪನೆಗಾಗಿ ಸರಕಾರ ಹಾಗೂ ಹೈಕೋರ್ಟ್‌ನಲ್ಲಿ
ಹಲವಾರು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಬೇಕಾಗಿದ್ದು ಕೊಂಚಮಟ್ಟಿನ ವಿಳಂಬವಾಗಬಹುದು. ಅದಾಗ್ಯೂ ತ್ವರಿತವಾಗಿ ನ್ಯಾಯಾಲಯ ಸ್ಥಾಪನೆಗಾಗಿ ಸ್ಥಳೀಯ ಮುಖಂಡರು ಸೇರಿದಂತೆ ಎಲ್ಲರಸಹಕಾರ ಪಡೆಯಲಾಗುವುದು ಎಂದು ಹೇಳಿದರು.

ಲಿಂಗಸುಗೂರು ಹಿರಿಯ ಶ್ರೇಣಿ ನ್ಯಾಯಾಧೀಶ ಲಕ್ಷ್ಮೀ ಕಾಂತ್‌ ಮಿಸ್ಕಿನ್‌, ನ್ಯಾಯವಾದಿ ನಾಗರಾಜ ಮಸ್ಕಿ, ಲಿಂಗಸುಗೂರು
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಂಬಣ್ಣ ಮಂಚಾಲಿ, ಮಸ್ಕಿ ಸಿಪಿಐ ಚನ್ನಯ್ಯ ಹಿರೇಮಠ, ತಹಶೀಲ್ದಾರ್‌ ಬಲರಾಮ
ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ, ಎ.ಇ.ಇ ಸಿ.ಎಸ್‌. ಪಾಟೀಲ, ಎಪಿಎಂಸಿ ಕಾರ್ಯದರ್ಶಿ ರಂಗನಾಥ, ಪಿಎಸ್‌ಐ ಶಶಿಧರ, ವಕೀಲರಾದ ರುದ್ರಪ್ಪ ಎಲಿಗಾರ, ಮಹಾಲಿಂಗಪ್ಪ ಪಾಟೀಲ,
ಆಶಿಕ್‌ ಅಹಮದ್‌, ಸೋಮಶೇಖರ, ಮಲ್ಲಿಕಾರ್ಜುನ, ಪ್ರಹ್ಲಾದ್‌ ಡಿಗ್ಗಾವಿ, ವೀರೇಶ ಸ್ಥಾವರಮಠ, ಬಸವರಾಜ ಹೊಸೂರು, ನಬಿ ಶೇಡ್ಮಿ, ಕೆ.ಎಲ್‌.ನಾಯಕ ಇತರರು ಇದ್ದರು.

Advertisement

ಶಾಸನಕ್ಕೆ ಭೇಟಿ: ಇದೇ ವೇಳೆ ನ್ಯಾಯಾಧೀಶರು ಮಸ್ಕಿಯ ಇತಿಹಾಸ ಪ್ರಸಿದ್ದ ಅಶೋಕ ಶಿಲಾಶಾಸನಕ್ಕೆ ಭೇಟಿ ನೀಡಿ ಶಾಸನ ಕುರಿತು ಸಮಗ್ರ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next