Advertisement
ಬೆಂಗಳೂರು: ನಗರದ ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆ ಖಾಲಿ ಮಾಡಲು ನಟಯಶ್ ಅವರ ತಾಯಿ ಪುಷ್ಪಾ ಅವರಿಗೆ ಹೈಕೋರ್ಟ್ ಎರಡು ತಿಂಗಳು ಕಾಲಾವಕಾಶ ನೀಡಿದೆ.
ಅವರು ಹಾಸನದಲ್ಲಿ ಮನೆ ನಿರ್ಮಿಸುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು 6 ತಿಂಗಳು ಸಮಯ ಹಿಡಿಯಬಹುದು. ಹೀಗಾಗಿ ಮನೆ ಖಾಲಿ ಮಾಡಲು ನೀಡಿದ್ದ ಕಾಲಾವಕಾಶವನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು. ಆದರೆ, 6 ತಿಂಗಳು ಕಾಲಾವಕಾಶ ನೀಡಲು ಮನೆ ಮಾಲೀಕ ಡಾ. ಮುನಿಪ್ರಸಾದ್
ಒಪ್ಪಿಲ್ಲ. ಕೊನೆಗೆ 2 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲು ಸಮ್ಮಿತಿಸಿದರು. ಅದರಂತೆ ಮೇ 31ರೊಳಗೆ ಮನೆ ಖಾಲಿ ಮಾಡಲು ಕಾಲಾವಕಾಶ ನೀಡಿ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿತು.