Advertisement

‌Mumbai; ಮಹಿಳೆಗೆ ಕಣ್ಣು ಹೊಡೆದು, ಕೈ ಸ್ಪರ್ಶಿಸಿದ ವ್ಯಕ್ತಿಯನ್ನು ಅಪರಾಧಿ ಎಂದ ಕೋರ್ಟ್

07:16 PM Aug 27, 2024 | Team Udayavani |

ಮುಂಬೈ: ಇಲ್ಲಿನ ನ್ಯಾಯಾಲಯವೊಂದು ಮಹಿಳೆಯೊಬ್ಬಳಿಗೆ ಕಣ್ಣು ಮಿಟುಕಿಸಿ ಆಕೆಯ ಕೈ ಹಿಡಿದ ಘಟನೆಗಾಗಿ 22 ವರ್ಷದ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ತೀರ್ಪು ನೀಡಿದೆ. ಆದರೆ ಆತನ ವಯಸ್ಸು ಮತ್ತು ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನಲೆಗಳಿಲ್ಲ ಎಂಬ ಅಂಶವನ್ನು ಪರಿಗಣಿಸಿ ಯಾವುದೇ ಶಿಕ್ಷೆಯನ್ನು ವಿಧಿಸಲು ನಿರಾಕರಿಸಿದೆ.

Advertisement

ಮೊಹಮ್ಮದ್‌ ಕೈಫ್‌ ಫಕೀರ್‌ ಅವರು ಈ ರೀತಿಯ ಪ್ರಕರಣದಲ್ಲಿ ಅಪರಾಧಿಯಾದವರು. ಆರೋಪಿ ಫಕೀರ್ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆಗಿಂತ ಕಡಿಮೆಯಿಲ್ಲದ ಶಿಕ್ಷೆಗೆ ಅರ್ಹನಾಗಿದ್ದರೂ, ಅವನ ವಯಸ್ಸು ಮತ್ತು ಯಾವುದೇ ಅಪರಾಧದ ಹಿನ್ನೆಲೆ ಇಲ್ಲದಿರುವ ಅಂಶವನ್ನು ಪರಿಗಣಿಸಿ, ಅವನಿಗೆ ಶಿಕ್ಷೆ ನೀಡುವುದಿಲ್ಲ ಎಂದು ಮ್ಯಾಜಿಸ್ಟ್ರೇಟ್ ಆರತಿ ಕುಲಕರ್ಣಿ ಹೇಳಿದರು.

ನ್ಯಾಯಾಲಯವು ಈ ತೀರ್ಪನ್ನು ಆಗಸ್ಟ್‌ 22ರಂದು ನೀಡಿದೆ. ಮಹಿಳೆ ಅನುಭವಿಸಿದ ಮಾನಸಿಕ ಸಂಕಟ ಮತ್ತು ಕಿರುಕುಳವನ್ನು ಕೋರ್ಟ್‌ ನಿರ್ಲಕ್ಷಿಸಲಾಗದು. ಆದರೆ ಆರೋಪಿಗೆ ಶಿಕ್ಷೆ ನೀಡುವುದರಿಂದ ಆತನ ಭವಿಷ್ಯಕ್ಕೆ ತೊಡಕಾಗಬಹುದು, ಅಲ್ಲದೆ ಸಮಾಜದಲ್ಲಿ ಆತನ ಹೆಸರು ಹಾಳಾಗಬಹುದು ಎಂದು ಹೇಳಿದರು.

ಸೆಕ್ಷನ್‌ 354 (ಮಹಿಳೆಯ ಘನತೆಗೆ ಹಾನಿ) ಅಡಿಯಲ್ಲಿ ಕೋರ್ಟ್‌ ಫಕೀರ್‌ ಅವರನ್ನು ಅಪರಾಧಿ ಎಂದು ಘೋಷಿಸಿದೆ.

15 ಸಾವಿರ ರೂ ಬಾಂಡ್‌ ನೀಡಿದ ಬಳಿಕ ಫಕೀರ್‌ ನನ್ನು ಬಿಡುಗಡೆ ಮಾಡಬಹುದು ಮತ್ತು ಕರೆದಾಗಲೆಲ್ಲಾ ತನಿಖಾಧಿಕಾರಿಯ ಎದುರು ಹಾಜರಾಗಬೇಕು ಎಂದು ಕೋರ್ಟ್‌ ಹೇಳಿದೆ.

Advertisement

2022ರ ಏಪ್ರಿಲ್‌ ನಲ್ಲಿ ಫಕೀರ್‌ ವಿರುದ್ದ ಬೈಕುಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳೆಯು ಸ್ಥಳೀಯ ಅಂಗಡಿಯಲ್ಲಿ ದಿನಸಿ ಸಾಮಾಗ್ರಿ ಆರ್ಡರ್‌ ಮಾಡಿದ್ದರು. ಆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫಕೀರ್‌, ಮಹಿಳೆಗೆ ಮನೆಗೆ ಸಾಮಾಗ್ರಿ ತಲುಪಿಸಲು ಹೋಗಿದ್ದ. ಮನೆಯಲ್ಲಿ ಮಹಿಳೆಯ ಬಳಿ ಆರೋಪಿ ನೀರು ಕೊಡಲು ಹೇಳಿದ್ದಾನೆ. ಆಕೆ ನೀರು ಕೊಡುವಾಗ ಆತ ಆಕೆಯ ಕೈಯನ್ನು ಮುಟ್ಟಿದ್ದಾನೆ, ಅಲ್ಲದೆ ಆಕೆಯನ್ನು ನೋಡಿ ಕಣ್ಣು ಹೊಡೆದಿದ್ದಾನೆ. ಅಲ್ಲದೆ ದಿನಸಿ ಬ್ಯಾಗ್‌ ಮರಳಿ ನೀಡುವಾಗ ಆಕೆಯ ಕೈಯನ್ನು ಮತ್ತೊಮ್ಮೆ ಸ್ಪರ್ಷಿಸಿದ್ದಾನೆ ಎಂದು ಆಕೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next