Advertisement
ಅಣ್ಣಾ ದೊರೈ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಡಿಎಂಕೆ ಮನವಿ ಮಾಡಿತ್ತು. ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಡಿಎಂಕೆ ಹೈಕೋರ್ಟ್ ಮೆಟ್ಟಿಲೇರಿತ್ತು.
Related Articles
Advertisement
ತೀವ್ರ ಆಕ್ರೋಶ ಗೊಂಡಿದ್ದ ಡಿಎಂಕೆ ಕಾರ್ಯಕರ್ತರು !
ಮರೀನಾ ಬೀಚ್‌ನಲ್ಲಿ ಅವಕಾಶ ನೀಡದ ಸರ್ಕಾರದ ವಿರುದ್ಧ ಡಿಎಂಕೆ ಕಾರ್ಯಕರ್ತರು ವ್ಯಾಪಕ ಆಕ್ರೋಶ ಹೊರ ಹಾಕಿದ್ದರು. ಕೋರ್ಟ್ ತೀರ್ಪು ಸರ್ಕಾರದ ಪರವಾಗಿ ಬಂದಿದ್ದರೆ ಹಿಂಸಾಚಾರ ನಡೆಯುವ ಸಾಧ್ಯತೆಗಳು ಇದ್ದವು. ಆದರೆ ಕೋರ್ಟ್ ನೀಡಿರುವ ತೀರ್ಪು ಡಿಎಂಕೆ ಕಾರ್ಯಕರ್ತರಿಗೆ ನೋವಿನಲ್ಲು ಖುಷಿ ತಂದಿದೆ.
ವ್ಯಾಪಕ ಕಟ್ಟೆಚ್ಚರ ಮರೀನಾ ಬೀಚ್‌ನಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸಿ, ಸಮಾಧಿ ಕಾರ್ಯಕ್ಕೆ ಬೇಕಾಗಿರುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.