ಬೆಂಗಳೂರು: ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಷಯಗಳನ್ನು ಸರಳವಾಗಿ ಮತ್ತು ಸುಲಲಿತವಾಗಿ, ವಿಧ್ಯಾರ್ಥಿಗಳಿಗೆ ಭೋದಿಸಲು ನೆರವಾಗುವಂತೆ ಪಠ್ಯಕ್ರಮಗಳ ರಚನೆಯ ಅಗತ್ಯವಿದೆಯೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಾದಿಸಿದ್ದಾರೆ.
ಕನ್ನಡದ ಖ್ಯಾತ ಸಾಹಿತಿಗಳೂ ಮತ್ತು ಸಂಶೋಧಕರಾದ ಹಂಪ ನಾಗರಾಜಯ್ಯ ರಚಿಸಿದ. ಚಾರುಲತ-ವಸಂತ ಎಂಬ ಕಾವ್ಯ ಕಥನದ ಇಂಗ್ಲೀಷ್ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಹಂಪನಾರವರು ರಚಿಸಿರುವ ಚಾರುಲತಾ- ವಸಂತ, ಕೃತಿ, ಕನ್ನಡದಲ್ಲಿ ರಚಿತವಾದ ಸುಂದರ ಕಥನ ಕಾವ್ಯವಾಗಿದ್ದು, ಇಂಥಹ ಕೃತಿಯನ್ನು, ಮೂಲ ಕೃತಿಗೆ ಧಕ್ಕೆ ಬಾರದಂತೆ ತರ್ಜುಮೆ ಮಾಡಲಾಗಿದೆ ಎಂದರು.
ಅನುವಾದ ಕೃತಿಗಳಿಂದ ಕನ್ನಡ ಸಾರಸ್ವತ ಲೋಕ ವಿಸ್ತಾರ ವಾಗುತ್ತದೆ. ಪ್ರಪಚಂದ ಯಾವುದೇ ಭಾಷೆಗಳಿಗೂ ಪ್ರಬುದ್ಧತೆಯಲ್ಲಿ ಸರಿಸಾಟಿಯಾದ ಕನ್ನಡ ಭಾಷೆಯಲ್ಲಿಯೇ ತಾಂತ್ರಿಕ ವಿಷಯಗಳಾದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಷಯಗಳ ಪಠ್ಯಕ್ರಮಗಳು, ನಾಡಿನ ಭಾಷೆಯಲ್ಲಿಯೇ ಆಗಬೇಕು, ಎಂದು ಪ್ರತಿಪಾದಿಸಿದ ಸಚಿವರು ಈ ನಿಟ್ಟಿನಲ್ಲಿ, ಸಾಹಿತಿಗಳೂ ಮತ್ತು ಚಿಂತಕರು ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೋರಿದರು.
ಇದನ್ನೂ ಓದಿ:ಬೆಳ್ಳುಳ್ಳಿಯನ್ನು ಶುಂಠಿಯೆಂದ ಪಾಕ್ ಸಚಿವ!
ಕನ್ನಡ ಭಾಷೆಯಲ್ಲಿ ರಚಿತವಾದ ಅತ್ಯುತ್ತಮ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಗೊಳಿಸಲು ಅಡ್ಡಿಯಾಗಿರುವ ಲೇಖಕರ ಹಕ್ಕು ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಲು ಭರವಸೆ ನೀಡಿದ ಸಚಿವರು ಕನ್ನಡ ಭಾಷೆಯಲ್ಲಿ ರಚಿತ ವಾಗುವ ಎಲ್ಲಾ ಮೌಲ್ಯಯುತ ಕೃತಿಗಳು ನಾಡಿನ ಅಸ್ತಿಯಾಗಿದ್ದು, ಕನ್ನಡ ಹಾಗೂ ಸಾರಸ್ವತ ಲೋಕಕ್ಕೆ ನೀಡುವ ಕೊಡುಗೆಗಳಾಗಿವೆ ಎಂದರು.
ಚಾರುಲತಾ- ವಸಂತ, ಕೃತಿಯ ಬಗ್ಗೆ ವಿಮರ್ಶಕ ರಾಜೇಂದ್ರ ಚನ್ನಿ ಮತ್ತು ಮಲ್ಲೇಪುರಂ ಜಿ ವೆಂಕಟೇಶ್ ರವರು, ಕೃತಿಯನ್ನು ಪರಿಚಯಿಸಿ ಮಾತನಾಡಿದರು.
ಕೃತಿರಚನಕಾರ ಹಂಪ ನಾಗರಾಜಯ್ಯ ಮತ್ತು ಅವರ ಪತ್ನಿ ಕಮಲಾ ಹಂಪನಾರನ್ನು, ಸಚಿವರು ಈ ಸಂದರ್ಭದಲ್ಲಿ, ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ಹೆಚ್ ಎಸ್ ವೆಂಕಟೇಶ ಮೂರ್ತಿ, ಗುರುರಾಜ ಕರ್ಜಗಿ, ಹಾಗೂ ಇತರ ಗಣ್ಯರೂ ಹಾಜರಿದ್ದರು.