Advertisement

ಯುವತಿ ಎದುರು ಪ್ಯಾಂಟ್‌ ಜಿಪ್‌ ಬಿಚ್ಚಿದ ಕೊರಿಯರ್‌ ಬಾಯ್‌ ಸೆರೆ

11:43 AM Nov 30, 2017 | Team Udayavani |

ಬೆಂಗಳೂರು: ಕೊರಿಯರ್‌ ಕೊಡುವ ನೆಪದಲ್ಲಿ ವಿದ್ಯಾರ್ಥಿನಿ ಎದುರು ಪ್ಯಾಂಟ್‌ ಜಿಪ್‌ ಬಿಚ್ಚಿದ್ದ ಆರೋಪದ ಮೇಲೆ ಕೊರಿಯರ್‌ ಬಾಯ್‌ ವೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಯದ್‌ ಇರ್ಫಾನ್‌ (30) ಬಂಧಿತ.

Advertisement

ಕುಮಾರಸ್ವಾಮಿ ಲೇಔಟ್‌ ನಿವಾಸಿಯಾದ ಈತ ಕೊರಿಯರ್‌ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿ ದ್ದಾನೆ. ನ.23ರಂದು ಜಯನಗರ 7ನೇ ಹಂತದಲ್ಲಿರುವ ಮನೆಯೊಂದಕ್ಕೆ ಪಾರ್ಸೆಲ್ ಕೊಡಲು ಹೋಗಿದ್ದ. ವಿಳಾಸ ಕೇಳಲು ಫ್ಯಾಷನ್‌ ಡಿಸೈನರ್‌ ವಿದ್ಯಾರ್ಥಿನಿಮನೆ ಬಾಗಿಲು ತಟ್ಟಿದ್ದಾನೆ. 

ವಿದ್ಯಾರ್ಥಿನಿ ವಿಳಾಸ ಗೊತ್ತಿಲ್ಲ ಎಂದಿದ್ದಾರೆ. ನ.27ರಂದು ಮತ್ತೆ ಕೊರಿಯರ್‌ ತೆಗೆದುಕೊಂಡು ಅದೇ ಮನೆಗೆ ಹೋದ ಆರೋಪಿ, ಬಾಗಿಲು ತೆರೆದ ವಿದ್ಯಾರ್ಥಿನಿಗೆ ಕೈ ಸನ್ನೆಯಲ್ಲಿ ಒಳಗೆ ಬರಲೇ ಎನ್ನುತ್ತಾ, ಆಕೆ ಮುಂದೆ ಪ್ಯಾಂಟ್‌ ಜೀಪ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ.

ಇದರಿಂದ ಗಾಬರಿಯಾಗಿ ಸಂತ್ರಸ್ತೆ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಆರೋಪಿ ಪರಾರಿಯಾಗಿದ್ದ. ಆತನ ಬೈಕ್‌ ನೋಂದಣಿ ಸಂಖ್ಯೆ ಬರೆದಿಟ್ಟುಕೊಂಡಿದ್ದ ಸಂತ್ರಸ್ತೆ, ಕೂಡಲೇ ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದರು. ನಗರ ಪೊಲೀಸ್‌ ಕಮಿಷನರ್‌ಗೂ ಟ್ವೀಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next