ಮುಂಬಯಿ: ಚುನಾವಣೆಗೆ ಸ್ಪರ್ಧಿಸಲು ಧೈರ್ಯ ಬೇಕಾಗುತ್ತದೆ. ಗೆಲುವು ಅಥವಾ ಸೋಲು ಇದ್ದೇ ಇರುತ್ತದೆ. ಆದರೆ ಬೇರೆಯವರ ಅಲೆಯಲ್ಲಿ ಗೆಲುವು ಕಾಣುವವರು ಕೇವಲ ಟಿಕೆಟು ಹಂಚಬಹುದು ಎಂದು ಮಹಾರಾಷ್ಟ್ರ ಸ್ವಾಭಿಮಾನ ಪಕ್ಷದ ನಾಯಕ ನಿಲೇಶ್ ರಾಣೆ ಅವರು ಯುವಸೇನೆಯ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರ ಮೇಲೆ ಟ್ವಿಟರ್ ಮೂಲಕ ಗುರಿ ಸಾಧಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆದಿತ್ಯ ಠಾಕ್ರೆ ಸ್ಪರ್ಧಿಸುತ್ತಾರೆಯೇ ಎನ್ನುವ ರಾಜಕೀಯ ಚರ್ಚೆಗಳು ಆರಂಭವಾಗಿವೆ. ಲೋಕಸಭೆ ಚುನಾವಣೆಯಲ್ಲಿ, ಶಿವಸೇನೆ-ಬಿಜೆಪಿ ಮೈತ್ರಿ 41 ಸ್ಥಾನಗಳನ್ನು ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ, ಆದಿತ್ಯ ಠಾಕ್ರೆ ಅವರು ಚುನಾವಣೆ ಅಖಾಡೆಗೆ ಇಳಿಸಿ, ಅವರಿಗೆ ರಾಜ್ಯ ಸರಕಾರದಲ್ಲಿ ದೊಡ್ಡ ಜವಾಬ್ದಾರಿಯನ್ನು ಕೊಡಬೇಕೇನ್ನುವ ಬೇಡಿಕೆ ಯುವ ಸೈನಿಕರದ್ದಾಗಿದೆ.
ಶಿವಸೇನೆ ಕಾರ್ಯದರ್ಶಿ ಮಿಲಿಂದ್ ನರ್ವೆಕರ್, ಹಿರಿಯ ನಾಯಕ ಮನೋಹರ ಜೋಶಿ ಮತ್ತು ಇತರ ಮುಖಂಡರು ಆದಿತ್ಯ ಠಾಕ್ರೆಯು ಸ್ಪರ್ಧಿಸಿದರೆ ನಮ್ಮ ಸಂತೋಷವೆಂದು ತಮ್ಮ ಭಾವನೆ ವ್ಯಕ್ತಪಡಿಸಿ¨ªಾರೆ.
ಇದರ ಹಿನ್ನೆಲೆಯಲ್ಲಿ,ಟ್ವೀಟರ್ ಮಾಡಿದ ನಿಲೇಶ್ ರಾಣೆ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಧೈರ್ಯಬೇಕು. ಠಾಕ್ರೆ ಕುಟುಂಬದ ಯಾವುದೇ ಹಿರಿಯ ಮುಖಂಡರೂ ಇಲ್ಲಿತನಕ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಠಾಕ್ರೆ ಕುಟುಂಬವು ಮಾತೋಶ್ರೀಯಲ್ಲಿ ಕುಳಿತು “ರಿಮೋಟ್ ಕಂಟ್ರೋಲ…’ ಮೂಲಕ ರಾಜಕೀಯ ಸೂತ್ರ ನಡೆಸುತ್ತಿದೆ ಎಂದು ಅವರು ಪರೋಕ್ಷವಾದ ಟ್ವಿಟರ್ ಮೂಲಕ ಹೇಳಿಕೆ ನೀಡಿದರು.