Advertisement

ಮೂಡಿಗೆರೆ: ಪ್ರೇಮಿಗಳ ದಿನದಂದು ಸಾರ್ವಜನಿಕ ಚುಂಬನ : ಜೋಡಿಗೆ ತರಾಟೆ

04:07 PM Feb 14, 2022 | Team Udayavani |

ಮೂಡಿಗೆರೆ: ಇಲ್ಲಿನ ಮುದ್ರೆಮನೆ ಬಳಿ ಪ್ರೇಮಿಗಳ ದಿನವಾದ ಸೋಮವಾರ ಯುವ ಜೋಡಿಯೊಂದು ಹಾಡ ಹಗಲೇ ಚುಂಬಿಸಿಕೊಂಡು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

Advertisement

ಬಸ್ ಸ್ಟಾಪ್ ನಲ್ಲಿ ಕುಳಿತು ಯುವಕ ಮತ್ತು ಯುವತಿ ಲವ್ವಿ ಡವ್ವಿ ನಡೆಸುತ್ತಾ, ಚುಂಬಿಸುತ್ತಿದ್ದರು. ಈ ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ವೈರಲ್ ಆಗಿದೆ.

ಅಸಭ್ಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇಬ್ಬರನ್ನೂ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಬಳಿಕ ಜೋಡಿ ಸ್ಥಳದಿಂದ ತೆರಳಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next