ಉತ್ತರ ಪ್ರದೇಶ: ಓಯೋ ಹೊಟೇಲ್ ನಲ್ಲಿ ರಹಸ್ಯ ಕ್ಯಾಮರಾ ಇಟ್ಟು,ಜೋಡಿಗಳ ಖಾಸಗಿ ದೃಶ್ಯವನ್ನು ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ 21 ಮೊಬೈಲ್ ಫೋನ್,22 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವಿವರ:
ಆರೋಪಿಗಳು ಮೊದಲು ಓಯೋ ಹೊಟೇಲ್ ರೂಮ್ ಗೆ ಹೋಗಿ ಅಲ್ಲಿಂದ ಹೊರಡುವ ಮುನ್ನ ರಹಸ್ಯ ಕ್ಯಾಮರಾವನ್ನು ಇರಿಸುತ್ತಿದ್ದರು. ಕೆಲ ದಿನಗಳ ಬಳಿಕ ಆ ಕ್ಯಾಮರಾಗಳನ್ನು ಅದೇ ಹೊಟೇಲ್ ಗೆ ಹೋಗಿ ವಾಪಾಸ್ ತರುತ್ತಿದ್ದರು. ಹೊಟೇಲ್ ರೂಮ್ ಗೆ ಬಂದು ಹೋದ ಜೋಡಿಗಳ ಖಾಸಗಿ ವಿಡಿಯೋವನ್ನು ನೋಡಿ, ಅವರನ್ನು ಸಂಪರ್ಕಿಸಿ, ಜೋಡಿಗಳಲ್ಲಿ ಹಣದ ಬೇಡಿಕೆಯಿಡುತ್ತಿದ್ದರು. ಹಣ ಕೊಡದಿದ್ರೆ ವಿಡಿಯೋ ಲೀಕ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು.
ಆರೋಪಿಗಳಲ್ಲಿ ವಿಷ್ಣು ಸಿಂಗ್, ಅಬ್ದುಲ್ ವಹಾವ್ ಓಯೋ ಹೊಟೇಲ್ ಬರುತ್ತಿದ್ದ ಜೋಡಿಗಳಿಗೆ ಅವರ ಖಾಸಗಿ ವಿಡಿಯೋಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟು, ಹಣ ಕೊಡದಿದ್ರೆ ಆನ್ಲೈನ್ ನಲ್ಲಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಮೂರನೇ ಆರೋಪಿ ಪಂಕಜ್, ಹಣಕ್ಕಾಗಿ ನೋಂದಾಯಿತ ಸಿಮ್ ಮತ್ತು ಇತರ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾದ ಖಾತೆಯನ್ನು ಒದಗಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ 22 ಎಟಿಎಂ ಕಾರ್ಡ್ ಗಳು ಬೇರೆ ಬೇರೆ ಬ್ಯಾಂಕ್ ಗಳದ್ದು. ಒಂದು ಆಧಾರ್ ಕಾರ್ಡ್, ಪಾನ್ ಪತ್ತೆಯಾಗಿವೆ. ಅಪಾರ ಪ್ರಮಾಣಸುಳ್ಳು ದಾಖಲೆಗಳು ಸಿಕ್ಕಿವೆ. ಈ ಗ್ಯಾಂಗ್ ನ ಸಹಚರನೊಬ್ಬ ನಾಪತ್ತೆಯಾಗಿದ್ದಾನೆ. ಈ ಗುಂಪು ಮೂರು ಗುಂಪುಗಳಾಗಿ ರಾಜ್ಯದೆಲ್ಲೆಡೆ ಅನಧಿಕೃತ ಕಾಲ್ ಸೆಂಟರ್, ನಕಲಿ ಸೀಮ್ ಕಾರ್ಡ್ ಗಳನ್ನು ಒದಗಿಸುತ್ತಿತ್ತು. ಇಂಥ ಕೃತ್ಯವನ್ನು ಪ್ಲ್ಯಾನ್ ಮಾಡಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.