Advertisement

ನವಜಾತ ಶಿಶು ಕೊಲೆ ಕೇಸು: ದಂಪತಿ ಬಂಧನ

02:24 PM Jul 06, 2021 | Team Udayavani |

ಚಿಂತಾಮಣಿ: ನವಜಾತ ಹೆಣ್ಣು ಶಿಶುವನ್ನು ಉಸಿರುಗಟ್ಟಿ ಸಾಯಿಸಿ, ಸಾರ್ವಜನಿಕ ಆಸ್ಪತ್ರೆಯ ಶೌಚಾಲಯದ ಕಿಟಕಿ ಕಂಬಿಗೆ ಕಟ್ಟಿದ್ದ ಪ್ರಕರಣ ಸಂಬಂಧ ದಂಪತಿಯನ್ನು ಸೋಮವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಾಗೇಪಲ್ಲಿ ತಾಲೂಕಿನ ಚಾಕವೇಲು ನಿವಾಸಿ  ಮಮತಾ ಮತ್ತು ಆಕೆಯ ಪತಿ ವೇಣುಗೋಪಾಲರೆಡ್ಡಿ ಬಂಧಿತರು. ಮಗುವನ್ನು ತಾವೇ ಕೊಲೆ ಮಾಡಿರುವುದಾಗಿ ಆರೋಪಿಗಳನ್ನು ತಪ್ಪೊಪ್ಪಿಕೊಂಡಿದ್ದಾರೆ.

ಗರ್ಭಿಣಿ ಆಗಿದ್ದನ್ನು ಯಾರಿಗೂ ತಿಳಿಸಿರಲಿಲ್ಲ: ನಾನು ಗರ್ಭಿಣಿ ಆಗಿದ್ದರ ಬಗ್ಗೆ ಪ್ರಾರಂಭದಲ್ಲಿ ಪೋಷಕರಿಗೆ ಆಗಲಿ, ಇತರರಿಗೂ ತಿಳಿಸಿರಲಿಲ್ಲ. ಇತ್ತೀ ಚಿಗೆ ಗಂಡನಿಗೆ ತಿಳಿಸಿದ್ದೆ. ಏಕಾಏಕಿ ಗರ್ಭ ಧರಿಸಿದ್ದು ಗೊತ್ತಾದರೆ ಅವಮಾನಕ್ಕೆ ಒಳಗಾಗುತ್ತೇನೆ ಹಾಗೂ ಹೆಣ್ಣು ಮಗು ಜನಿಸಿದ್ದರಿಂದ ಹುಟ್ಟಿದ ಕೂಡಲೇ ಇಬ್ಬರು ಸೇರಿ ನೇಣು ಬಿಗಿದು ಕೊಲೆ ಮಾಡಿದ್ದಾಗಿ ಮಮತಾ ಪೊಲೀಸರಿಗೆಹೇಳಿಕೆಕೊಟ್ಟಿದ್ದಾರೆ.

ಹಲವು ಅನುಮಾನ: ಇನ್ನು ಪ್ರಕರಣದ ಸುತ್ತ ಹತ್ತಾರು ಅನುಮಾನ ಹುಟ್ಟುಕೊಳ್ಳುತ್ತಿದ್ದು, ಆರೋಪಿ ಮಹಿಳೆ ಗರ್ಭಧರಿಸಿರುವ ಬಗ್ಗೆ ಪತಿಗೆ, ಅತ್ತೆಗೆ, ಆಕೆಯ ಪೋಷಕರಿಗೂ ತಿಳಿಸದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಈ ಹಿಂದೆ ಮಮತಾಳ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿದ್ದರಿಂದ ಮಗುವನ್ನು ಕೊಲೆ ಮಾಡಿರಬಹುದು ಎಂದು ಅನುಮಾನಗಳೂ ಹುಟ್ಟಿಕೊಂಡಿವೆ.

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲು: ಜು.3 ರಂದು ಹೊಟ್ಟೆ ನೋವು ಎಂದು ಪತಿ ಮತ್ತು ಅತ್ತೆಯೊಂದಿಗೆ ಆಸ್ಪತ್ರೆಗೆ ಬಂದ ಮಮತಾ ಶೌಚಾಲಯದಲ್ಲಿ ಹೆರಿಗೆ ಆಗಿದ್ದನ್ನು ಕಂಡು ಪತಿಗೆ ಹೇಳಿ ಮಗುವನ್ನು ಸಾಯಿಸಿದ್ದಾಳೆ. ಆದರಿಂದಮಗು ಕೊಲೆಯಲ್ಲಿ ಪತಿಗೂ ಪಾಲು ಇದೆ ಎಂದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸ್ಥಳ ಮಹಜರು: ಎಸ್ಪಿ ಮಿಥುನ್‌ ಕುಮಾರ್‌, ಚಿಂತಾಮಣಿ ಡಿವೈಎಸ್ಪಿ ವಿ.ಲಕ್ಷ್ಮಯ್ಯ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್‌ಐ ಜೆ.ಎನ್‌.ಆನಂದ್‌ಕುಮಾರ್‌ ನೇತೃತ್ವದ ತಂಡಆರೋಪಿಗಳನ್ನು ಬಂಧಿಸಿ ಸೋಮವಾರ ನಗರದ ಆಸ್ಪತ್ರೆಯ ಬಳಿ ಸ್ಥಳ ಮಹಜರು ಮಾಡಿ ಮಹಿಳೆಯ ಬಳಿ ಹೇಳಿಕೆ ಪಡೆದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ದೂರು ದಾಖಲಾದ 24 ಗಂಟೆಯೊಳಗೆ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿರುವ ನಗರ ಠಾಣೆ ಪಿಎಸ್‌ಐ ಜೆ.ಎನ್‌. ಆನಂದ್‌ಕುಮಾರ್‌, ಅಪರಾಧ ವಿಭಾಗದ ಸಿಬ್ಬಂದಿನಾಗಭೂಷಣ್‌, ಚಂದ್ರಕುಮಾರ್‌, ಸುನಿತಾ, ರವೀಂದ್ರ, ವಿಶ್ವನಾಥ್‌ ಅವರ ಕಾರ್ಯವನ್ನು ಎಸ್ಪಿ ಮಿಥುನ್‌ಕುಮಾರ್‌ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next