ಮಂಡ್ಯ: ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ರೈಲುಗಳ ಸಂಚಾರಕ್ಕೆ ಮಂಗಳವಾರ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ.
ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್) ಮನೋಹರ್, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ (ಡಿಆರ್‌ಎಂ) ಆರ್.ಎಸ್.ಸಕ್ಸೇನಾ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಶೋಕ್ ಗುಪ್ತಾ ಇತರರ ತಂಡ ಜೋಡಿ ರೈಲು ಮಾರ್ಗ ಕಾಮಗಾರಿಯನ್ನು ಸಂಪೂರ್ಣ ಪರಿಶೀಲಿಸಿದೆ. ಶ್ರೀರಂಗಪಟ್ಟಣದ ಮದ್ದಿನ ಮನೆ ಸ್ಥಳಾಂತರ, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರೈಲ್ವೆ ಸೇತುವೆಗಳ ಪರಿಶೀಲನೆಯೂ ನಡೆದಿದೆ.
ಇದೀಗ ಬೆಂಗಳೂರು-ಮೈಸೂರು ನಡುವಿನ 140 ಕಿ.ಮೀ. ಉದ್ದದ ಜೋಡಿ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ನೆನಗುದಿಗೆ ಬಿದ್ದಿದ್ದ 1.05 ಕಿ.ಮೀ. ಉದ್ದದ ಮಾರ್ಗವೂ ಓಡಾಟಕ್ಕೆ ಸಜ್ಜುಗೊಂಡಿದೆ. ಕಳೆದ ಮೂರು ದಿನಗಳಿಂದ ಪರೀಕ್ಷಾರ್ಥ ಯಶಸ್ವಿ ಸಂಚಾರ ನಡೆಸಲಾಗಿದೆ ಎಂದು ಹೇಳಿದರು.
ಸೋಮವಾರ ರಾತ್ರಿ ವೇಳೆಗೆ ಈ ಮಾರ್ಗದ ಕಾಮಗಾರಿ ಕೈಗೊಂಡಿರುವ ನಿರ್ಮಾಣ ತಂಡದ ಅಧಿಕಾರಿಗಳು ಬೆಂಗಳೂರು-ಮೈಸೂರು ಮಾರ್ಗ ಸಂಚಾರ ನಿಯಂತ್ರಕ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದಾರೆ. ಮಂಗಳವಾರ ಬೆಳಗ್ಗೆ ರೈಲ್ವೆ ಇಲಾಖೆ ಅಧೀಕೃತವಾಗಿ ಸಂಚಾರ ಆರಂಭಿಸಲು ಹಸಿರು ನಿಶಾನೆ ನೀಡಲಿದೆ ಎಂದು ರೈಲ್ವ ಅಧಿಕಾರಿಗಳು ತಿಳಿಸಿದ್ದಾರೆ.
“ಮಂಗಳೂರು ಜಂಕ್ಷನ್-ಯಶವಂತಪುರ-ಮಂಗಳೂರು ಹಗಲು ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂಬ ಪ್ರಸ್ತಾವನೆಯನ್ನು ಪಾಲಾ^ಟ್ ವಲಯದಿಂದ ಈಗಾಗಲೇ ಕಳುಹಿಸಲಾಗಿದೆ. ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಹೆಚ್ಚಿನ ರೈಲುಗಳಿಗೆ ಮಂಗಳೂರು ಸೆಂಟ್ರಲ್‌ನಲ್ಲಿ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ನೂತನ ಪ್ಲಾಟ್‌ಫಾರ್ಮ್ ನಿರ್ಮಾಣವಾಗಲಿದೆ. ಪ್ರಸ್ತುತ ಮಂಗಳೂರು ಸೆಂಟ್ರಲ್‌ನಿಂದ ಯಾವುದೇ ರೈಲನ್ನು ವರ್ಗಾವಣೆ ಮಾಡುತ್ತಿಲ್ಲ.
-ನರೇಶ್ ಲಾಲ್ವಾನಿ, ಡಿಆರ್‌ಎಂ, ರೈಲ್ವೇ ಪಾಲಕ್ಕಾಡ್ ವಿಭಾಗ