Advertisement

ಕೋವಿಡ್ ಕಾಲದಲ್ಲೊಂದು ವಿಶೇಷ ಘಟನೆ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ

11:32 PM Jul 12, 2020 | Hari Prasad |

ಬೆಂಗಳೂರು: ನಗರದಲ್ಲಿ ಇದೀಗ ಎಲ್ಲೆಂದರಲ್ಲಿ ಕೋವಿಡ್ 19 ಸೋಂಕಿನದ್ದೇ ಸುದ್ದಿ.

Advertisement

ಕೋವಿಡ್ 19 ಸೋಂಕು ಹರಡುವುದರಲ್ಲಿ ರಾಜ್ಯದ ಹಾಟ್ ಸ್ಪಾಟ್ ಆಗಿ ಪರಿಣಮಿಸಿರುವ ಬೆಂಗಳೂರಿನಲ್ಲಿ ದಿನಂಪ್ರತಿ ಸಾವಿರಾರು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುತ್ತವೆ ಮತ್ತು 30 ರಿಂದ 40 ಸಾವುಗಳು ದಿನಂಪ್ರತಿ ಸಂಭವಿಸುತ್ತಲೇ ಇರುತ್ತದೆ.

ಹೀಗೆ ಕೋವಿಡ್ 19 ಸೋಂಕು ಮತ್ತು ಅದಕ್ಕೆ ಸಂಬಂಧಪಟ್ಟ ಸಾವಿನ ಸುದ್ದಿಗಳ ನಡುವೆ ಉದ್ಯಾನ ನಗರಿಯಲ್ಲೊಂದು ಅಪರೂಪದ ಸಾವಿನ ಪ್ರಕರಣ ವರದಿಯಾಗಿದೆ.

ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿರುವ ಘಟನೆ ಇದಾಗಿದ್ದು, ಜೆ.ಸಿ.ನಗರದ ಕುರುಬರ ಹಳ್ಳಿಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಜೆ.ಸಿ.ನಗರದ ಕುರುಬರಹಳ್ಳಿಯ ನಿವಾಸಿ ಚಂದ್ರಶೇಖರ್ (75) ಹಾಗೂ ಸುಶೀಲಮ್ಮ (65) ಮೃತ ದಂಪತಿ. ಚಂದ್ರಶೇಖರ್ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ ನಗರದ HALನಲ್ಲಿ ಭದ್ರತಾ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

Advertisement

ಕುರುಬರಹಳ್ಳಿಯ ತಮ್ಮ ಪುತ್ರಿಯ ನಿವಾಸದಲ್ಲಿ ದಂಪತಿ ನೆಲೆಸಿದ್ದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರಿಗೆ ಭಾನುವಾರ ಬೆಳಗ್ಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಪತಿ ಮೃಪತಪಟ್ಟಿರುವುದು ಖಚಿತವಾಗುತ್ತಲೇ ಪತ್ನಿ ಸುಶೀಲಮ್ಮ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸುಶೀಲಮ್ಮ ಅವರನ್ನು ಆಸ್ಪತ್ರೆಗೆ ಸೇರಿಸಲು ಕುಟುಂಬದವರು ಮುಂದಾಗುವ ವೇಳೆಗೆ ಅವರೂ ಮೃತಪಟ್ಟಿದ್ದಾರೆ. ಪತಿ ಸಾವಿನ 15 ನಿಮಿಷಗಳ ಅಂತರದಲ್ಲಿ ಸುಶೀಲಮ್ಮ ಸಹ ಮೃತಪಟ್ಟಿದ್ದಾರೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಜೊತೆಯಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ದಂಪತಿಗೆ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಪಾರ್ಥಿವ ಶರೀರವನ್ನು ನಗರದ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ದಂಪತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಬ್ಬರಿಗೂ ಕೋವಿಡ್ 19 ಸೋಂಕು ಇರಲಿಲ್ಲ ಎಂದು ಶಂಕರಮಠ ವಾರ್ಡ್‍ನ ಪಾಲಿಕೆ ಸದಸ್ಯ ಎಂ.ಶಿವರಾಜು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next