Advertisement

ಪ್ರಧಾನಿ ಮೋದಿ ಅವರ ಪ್ರಧಾನ ಕಾರ್ಯದರ್ಶಿಯ ಮಗಳು, ಅಳಿಯನಂತೆ ನಟಿಸಿ ವಂಚನೆ… ದಂಪತಿ ಬಂಧನ

10:54 AM Dec 31, 2024 | Team Udayavani |

ಭುವನೇಶ್ವರ್: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರ ಮಗಳು ಮತ್ತು ಅಳಿಯನಂತೆ ನಟಿಸಿ ಜನರನ್ನು ವಂಚಿಸಿದ ದಂಪತಿಯನ್ನು ಒಡಿಶಾ ಪೊಲೀಸರು ಸೋಮವಾರ(ಡಿ.30) ಬಂಧಿಸಿದ್ದಾರೆ.

Advertisement

ಬಂಧಿತ ದಂಪತಿಯನ್ನು ಹನ್ಸಿತಾ ಅಭಿಲಿಪ್ಸಾ (38) ಮತ್ತು ಅನಿಲ್ ಕುಮಾರ್ ಮೊಹಂತಿ ಎಂದು ಹೇಳಲಾಗಿದೆ. ಈ ಇಬ್ಬರೂ ಸೇರಿಕೊಂಡು ನಮಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿದ್ದೇವೆ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.

ಆರೋಪಿ ದಂಪತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329(3), 319(2), 318(4) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭುವನೇಶ್ವರದ ವಲಯ 6ರ ಹೆಚ್ಚುವರಿ ಡಿಸಿಪಿ ಸ್ವರಾಜ್ ದೇಬ್ತಾ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರ ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ಜನರನ್ನು ವಾಚಿಸುತಿದ್ದರು ಅಲ್ಲದೆ ಮನೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಮನೆಯ ಗೋಡೆಗಳಲ್ಲಿ ಅಳವಡಿಸಿಕೊಂಡಿದ್ದು ಪೊಲೀಸರು ಛಾಯಾಚಿತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ ಹನ್ಸಿತಾ ಮತ್ತು ಮೊಹಂತಿ ದಂಪತಿ ಐಷಾರಾಮಿ ಕಟ್ಟಡದಲ್ಲಿ ವಾಸವಿದ್ದು ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆಗಿರುವ ನಕಲಿ ಛಾಯಾಚಿತ್ರಗಳನ್ನು ಮುದ್ರಿಸಿ ಭುವನೇಶ್ವರದ ಶ್ರೀಮಂತ ಉದ್ಯಮಿಗಳು, ಬಿಲ್ಡರ್‌ಗಳು, ಗಣಿಗಾರಿಕೆ ನಿರ್ವಾಹಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳನ್ನು ವಂಚಿಸುತಿದ್ದರು ಅಷ್ಟು ಮಾತ್ರವಲ್ಲದೆ ಸರಕಾರದ ಟೆಂಡರ್ ಪಾಸ್ ಮಾಡಲು ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ಗಣಿ ಮಾಲೀಕರೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ ವೇಳೆ ದಂಪತಿಗಳ ನಕಲಿ ಮುಖ ಬಯಲಾಗಿದೆ.

Advertisement

ಇದನ್ನೂ ಓದಿ: Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next