ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಗುಡ್ಡೆಯಲ್ಲಿ ಅನ್ಯಕೋಮಿನ ಜೋಡಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಿಡಿದು ಪೊಲೀಸರರಿಗೆ ಒಪ್ಪಿಸಿದ್ದಾರೆ.
ಮೂಡಬಿದಿರೆಯ ಜುನೈದ್ ಎಂಬಾತ ಕೈರಂಗಳ ವಿದ್ಯಾನಗರದ ಹಿಂದೂ ಯುವತಿಯೊಂದಿಗೆ ಮುಡಿಪು ಬೆಟ್ಟದಲ್ಲಿ ಒಟ್ಟಿಗೆ ಇದ್ದಾಗ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದು, ಇಬ್ಬರಿಗೂ ಥಳಿಸಿ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಸುಬ್ರಹ್ಮಣ್ಯ: ಶೌಚಾಲಯದಲ್ಲಿ ಬಂಧಿಯಾದ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ
ಯುವತಿಗೆ ಇನ್ಸ್ಟಾಗ್ರಾಂ ಮೂಲಕ ಈ ಯುವಕನ ಪರಿಚಯವಾಗಿತ್ತು ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಮೂರು ಘಟನೆಗಳು ನಡೆದಿದ್ದು ಬೋಳಿಯಾರ್ ಬಳಿ ಯುವಕನಿಂದ ಅತ್ಯಾಚಾರ ಯತ್ನ, ಬಾಳೆಪುಣಿ ಪುಣ್ಯಕೋಟಿ ನಗರದ ಬಳಿ ಯುವತಿಯ ಅತ್ಯಾಚಾರ ಯತ್ನ ಇದೀಗ ಮುಡಿಪುವಿನಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯವಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದರು: ರಾಮಲಿಂಗಾರೆಡ್ಡಿ
ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ