Advertisement

ಹರಕೆ ತೀರಿಸಲು ಜಾತ್ರೆಯಲ್ಲಿ ಜೋಡಿ ನೃತ್ಯ, ಚುಂಬನ!

11:42 PM Feb 28, 2020 | Lakshmi GovindaRaj |

ದಾವಣಗೆರೆ: ಸಾಮಾನ್ಯವಾಗಿ ದೇವರಿಗೆ ಹೂವು-ಹಣ್ಣು, ಉಡಕ್ಕಿ, ಬೇಟೆ, ಸಿಹಿಯೂಟ..ಹೀಗೆ ನಾನಾ ವಿಧದಲ್ಲಿ ಹರಕೆ ತೀರಿಸುವುದು ಸಾಮಾನ್ಯ. ಆದರೆ, ದಾವಣಗೆರೆ ತಾಲೂಕಿನ ಮಾಗಾನಹಳ್ಳಿಯ ಊರಮ್ಮನ ಜಾತ್ರೆಯಲ್ಲಿ ನೃತ್ಯ ಮಾಡಿ, ಹರಕೆ ತೀರಿಸುವ ವಿಶಿಷ್ಟ ಪದ್ಧತಿಯಿದ್ದು, ಶುಕ್ರವಾರ ಭಕ್ತರು ನೃತ್ಯ ಹರಕೆ ತೀರಿಸಿದ್ದಾರೆ.

Advertisement

ಮಾಗಾನಹಳ್ಳಿ ಮಾತ್ರವಲ್ಲ, ಸುತ್ತ ಮುತ್ತಲ ಗ್ರಾಮಗಳಲ್ಲಿ 13 ವರ್ಷಕ್ಕೊಮ್ಮೆ ನಡೆಯುವ ಊರಮ್ಮನ ಜಾತ್ರೆ ಸಂಭ್ರಮ ಮನೆ ಮಾಡಿದ್ದು, ಶುಕ್ರವಾರ ಆಶಾದಿ ನೃತ್ಯದಿಂದ ಹರಕೆ ತೀರಿಸಲಾಯಿತು. ಗ್ರಾಮದ ಮುಖಂಡ ನೃತ್ಯಗಾತಿ ಜತೆಗೆ ಹೆಜ್ಜೆ ಹಾಕುವುದು ಮಾತ್ರವಲ್ಲ, ಸಾವಿರಾರು ಜನರ ಎದುರೇ ಚುಂಬಿಸುತ್ತಾರೆ. ನೃತ್ಯ ದಿಂದ ದೇವಿಯ ಹರಕೆ ತೀರಿಸುವಂತಹ ಈ ಪದ್ಧತಿಯನ್ನು ಇಂದಿಗೂ ಅನೂಚಾನವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಊರಮ್ಮನ ಜಾತ್ರೆ ಅಂಗವಾಗಿ ಆಶಾದಿ ನೃತ್ಯ ಮಾಡುವಂತಹವರನ್ನೇ ಆಹ್ವಾನಿಸಲಾಗುತ್ತದೆ. 70, 40 ಮತ್ತು 35 ವಯೋ ಮಾನದ ಮಹಿಳೆಯರು ಆಶಾದಿ ನೃತ್ಯ ಮಾಡುತ್ತಾರೆ. ಮುಖಂಡರೊಬ್ಬರು ಅವರೊಟ್ಟಿಗೆ ಹೆಜ್ಜೆ ಹೆಜ್ಜೆಗೆ ಹಾಕುತ್ತ, ಆಗಾಗ ಮುತ್ತು ನೀಡುವುದು, ಮತ್ತೆ ನೃತ್ಯ ಮಾಡುವುದು ನಡೆದೇ ಇರುತ್ತದೆ. ದೊಡ್ಡವರಷ್ಟೇ ಅಲ್ಲ, ಚಿಕ್ಕ ಮಕ್ಕಳು ಸಹ ನೃತ್ಯದಿಂದ ಊರಮ್ಮ ದೇವಿಗೆ ಹರಕೆ ತೀರಿಸಿದರು.

ವಯೋಮಾನದ ನಿರ್ಬಂಧವಿಲ್ಲದೆ ನೃತ್ಯ ಮಾಡಿ, ಊರಮ್ಮ ದೇವಿಗೆ ಹರಕೆ ತೀರಿಸುವುದರಿಂದ ಕುಟುಂಬಕ್ಕೆ ಮಾತ್ರವಲ್ಲ ಇಡೀ ಗ್ರಾಮಕ್ಕೆ ಒಳಿತಾಗುವುದು ಎಂಬ ಅಚಲ ನಂಬಿಕೆಯಿದೆ. ಹೀಗಾಗಿ ಈಗಲೂ ಈ ಪದ್ಧತಿ ಚಾಲ್ತಿಯಲ್ಲಿದ್ದು, ಅದನ್ನು ಮುಂದುವರಿಸಿಕೊಂಡು ಬರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next