Advertisement

ಮಿರ್ಜಾಪುರ : ಮರಕ್ಕೆ ನೇಣು ಬಿಗಿದು ದಂಪತಿ ಆತ್ಮಹತ್ಯೆ

11:59 AM Nov 07, 2017 | udayavani editorial |

ಮಿರ್ಜಾಪುರ,ಉತ್ತರ ಪ್ರದೇಶ  : ಮದುವೆಯಾದ ಜೋಡಿಯೊಂದು ಇಲ್ಲಿನ ಸೀತಾಲಗಢ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

Advertisement

ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಉಷಾ ಕೋಲ್‌ 28 ಮತ್ತು ಆಕೆಯ ಪತಿ ಮಿತ್ತು ಕೋಲ್‌ 30 ಎಂದು ಗುರುತಿಸಲಾಗಿದೆ. ಯಾವ ಕಾರಣಕ್ಕಾಗಿ ಈ ದಂಪತಿ ಆತ್ಮಹತ್ಯೆಗೆ ಶರಣಾಯಿತು ಎನ್ನುವುದು ಗೊತ್ತಾಗಿಲ್ಲ.

ಕೆಲವರು ಹೇಳುವ ಪ್ರಕಾರ ಕೌಟುಂಬಿಕ ಕಾರಣಗಳಿಗಾಗಿ ಈ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎನ್ನಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next