ತೀರ್ಥಹಳ್ಳಿ : ಅಡಿಕೆ ಚೇಣಿ ಮಾಡಿ ಸಾಲ ಮಾಡಿ, ಉದ್ಯಮದಲ್ಲಿ ನಷ್ಟ ಅನುಭವಿಸಿ ಮನನೊಂದ ದಂಪತಿಗಳಿಬ್ಬರೂ ನೇಣಿಗೆ ಕೊರಳು ಒಡ್ಡಿದ ದಾರುಣ ಘಟನೆ ತಾಲ್ಲೂಕಿನ ಸಂತೆಹಕ್ಲು ಸಮೀಪದ ಪೂರಲುಕೊಪ್ಪದಲ್ಲಿ ನಡೆದಿದೆ.
ಸಂತೆಹಕ್ಲು ಸಮೀಪದ ಮಂಜುನಾಥ್ (46 )ಮತ್ತು ಪತ್ನಿ ಉಷಾ ( 43) ನೇಣಿಗೆ ಶರಣಾದ ದಂಪತಿ. ಇವರಿಗೆ 18 ಮತ್ತು 16 ವರ್ಷದ ಎರಡು ಗಂಡು ಮಕ್ಕಳು ಇದ್ದಾರೆ.ಇವರಿಗೆ ಸುಮಾರು 2 ಎಕರೆ ಜಮೀನು ಇದ್ದು ಸಣ್ಣ ಕೃಷಿಕರಾಗಿದ್ದಾರೆ, ಕೃಷಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಹಲವುಕಡೆ ಸಾಲವನ್ನು ಮಾಡಿಕೊಂಡಿದ್ದು ಕೊರೊನ ಹಿನ್ನೆಲೆಯಲ್ಲಿ ಅವರಿಗೆ ಅದನ್ನು ನಿರ್ವಹಣೆ ಮಾಡಲು ಕಷ್ಟವಾಗಿತ್ತು. ಇದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದರೆ.
ಕೊರೊನಾ ಮೊದಲ ಅಲೆಯಿಂದ ಪ್ರಾರಂಭವಾದ ಸಾಲದ ಹೊಡೆತ ಮೂರನೆ ಅಲೆಯ ಹೊತ್ತಿನಲ್ಲಿ ಆ ದಂಪತಿಯ ಬದುಕನ್ನೇ ಕತ್ತಲುಮಯ ಮಾಡಿದೆ. ಕೊರೊನಾ ಲಾಕ್ ಡೌನ್ ಎಫೆಕ್ಟ್ ನಿಂದ ವ್ಯವಹಾರ ವಹಿವಾಟು ಇಲ್ಲದೆ ಮಾಡಿದ ಸಾಲವನ್ನು ಇವರಿಗೆ ತೀರಿಸಲು ಆಗಿರಲಿಲ್ಲ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ ಇವರು ಅಕ್ಷಯ್ ಹಾಗು ಆಕಾಶ್ ಎಂಬ ಗಂಡುಮಕ್ಕಳನ್ನು ದಂಪತಿ ಅಗಲಿರುವುದಕ್ಕೆ ಗ್ರಾಮಸ್ಥರು ಮರುಗಿದ್ದಾರೆ. ಒಬ್ಬರ ಸಾಲ ತೀರಿಸಲು ಮತ್ತೊಬ್ಬರ ಹತ್ತಿರ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ
ಲಕ್ಷಾಂತರ ಸಾಲವನ್ನು ಹೇಗೆ ತೀರಿಸುವುದೆಂಬ ಆತಂಕ ಮಾತು ಈ ದಂಪತಿಗಳಿಂದ ಕೇಳಿ ಬರುತ್ತಿತ್ತು ಎನ್ನುವ ಮಾತು ಊರಿನ ಗ್ರಾಮಸ್ಥರಿಂದಲೇ ಕೇಳಿ ಬರುತ್ತಿದೆ. ಕೊರೊನಾ ಮೂರನೇ ಅಲೆಯ ವಾರಾಂತ್ಯದ ಲಾಕ್ ಡೌನ್ ಶುರುವಾಗುತ್ತಿದ್ದಂತೆ ಇನ್ನು ನಾವು ಸಾಲ ತೀರಿಸಲು ಸಾಧ್ಯವಿಲ್ಲ ಎಂಬಂತ ಹತಾಶೆ ದಂಪತಿಯನ್ನು ಕಾಡಿದೆ. ಹೀಗಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದು, ಮಕ್ಕಳಿಲ್ಲದ ಸಂದರ್ಭದಲ್ಲಿ ಮನೆಯಲ್ಲಿ ಡೆತ್ ನೋಟ್ ಬರೆದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.