Advertisement

ಪ್ರತಿಭೆಯಿಂದ ದೇಶದ ಪ್ರಗತಿ: ಮೊಯ್ಲಿ

11:03 AM Oct 08, 2017 | Team Udayavani |

ಯಲಹಂಕ: ಪ್ರತಿಭೆಯನ್ನುವುದು ಕ್ರಾಂತಿಯಾಗಿ ಹೊರಹೊಮ್ಮಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು  ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದರು. ಇಲ್ಲಿನ ನಶೇಷಾದ್ರಿಪುರಂ ಪ್ರಥಮದರ್ಜೆ ಕಾಲೇಜಿನಲ್ಲಿ ಅಯೊಜಿಸಿದ್ದ ಅಂತಾರಾಷ್ಟ್ರೀಯ ವಿಜಾnನ ಮತ್ತು ತಂತ್ರಜಾnನದ ಜಾಗತಿಕ ಸಮಸ್ಯೆಗಳ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಇತ್ತೀಚಿನ ದಿನಗಳಲ್ಲಿ ವಿಧ್ಯಾರ್ಥಿಗಳ ಪ್ರತಿಭೆಗೆ ತಕ್ಕ ಅವಕಾಶಗಳು ದೊರೆಯುತ್ತಿಲ್ಲ. ಇದರ ಬಗ್ಗೆ ವಿದ್ಯಾಸಂಸ್ಥೆಗಳು, ಸರ್ಕಾರ ಗಮನಹರಿಸಬೇಕು ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಕಾಲೇಜು ವಾತಾವರಣದಲ್ಲಿ ನಡೆಯಬೇಕು. ಇಂದು ಸಾಮಾಜಿಕ ನ್ಯಾಯದಿಂದ ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನಮಾನ ದೊರೆತಿದೆ.

ಬೆಂಗಳೂರಿನಲ್ಲಿ ಎಲಕ್ಟ್ರಾನಿಕ್‌ ಸಿಟಿ ನಿರ್ಮಾಣದಿಂದ  ದೇಶ ಹಾಗೂ ಪ್ರಪಂಚ ಬೆಂಗಳೂರಿನತ್ತ ತಿರುಗಿ ನೊಡುವಂತಾಗಿದೆ ಎಂದರು. ಸಮ್ಮೇಳನದಲ್ಲಿ ಆಪಾ^ನಿಸ್ಥಾನ, ಸೂಡಾನ್‌ ಸೇರಿದಂತೆ ವಿವಿಧ ದೇಶದ  ವಿವಿ ವಿದ್ಯಾರ್ಥಿಗಳು ವಿಚಾರ ವಿನಿಮಯದಲ್ಲಿ ಪಾಲ್ಗೊಂಡಿದ್ದರು. ಪ್ರಾಂಶುಪಾಲ ವೆಂಕಟೇಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next