ಮಾಗಡಿ: ಬಿಜೆಪಿಯಿಂದ ದೇಶದ ಪ್ರಗತಿ ಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತತ್ವಾದರ್ಶಗಳ ಅಡಿಯಲ್ಲಿ ಮತಯಾಚಿಸುತ್ತಿದ್ದೇನೆ ಬಿಜೆಪಿ ಅಭ್ಯರ್ಥಿ ಎಂ.ಸಿ.ಹನುಮಂತರಾಜು ತಿಳಿಸಿದರು. ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿಯಿಂದ ದೇಶದ ಪ್ರಗತಿ ಕಾಣ ಬಹುದು. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಜನಪರವಾದ ಆಡಳಿತ ಜನಮೆಚ್ಚಿಗೆಗೆ ಪಾತ್ರರಾಗಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಜನತೆ ನಿರ್ಧರಿಸಿದ್ದಾರೆ. ಮಾಗಡಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಶಾಸಕರನ್ನಾಗಿಸುವ ಮೂಲಕ ಅಧಿಕಾರಕ್ಕೆ ತರಲು ಮತದಾರರು ಮತ ಹಾಕಲಿದ್ದಾರೆ.
ಕೇಂದ್ರ ಸರ್ಕಾರ ಸಾಧನೆಗಳನ್ನು ಗಮನದಲ್ಲಿಟ್ಟು ಕೊಂಡು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸ ಹೊಂದಿದ್ದಾರೆ. ತಾನೂ ಕಳೆದ 20 ವರ್ಷಗಳಿಂದ ಬೂತ್ ಮಟ್ಟದಿಂದಲೂ ಸೇವಾ ಕಾರ್ಯಕರ್ತನಾಗಿ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿದ ಸೇವೆಯನ್ನು ಗುರುತಿಸಿ ಈ ಬಾರಿ ತನಗೆ ಅವಕಾಶ ನೀಡಿದೆ. ಮತದಾರರು ಈ ಬಾರಿ ಬಿಜೆಪಿಯತ್ತ ಮತದಾರರು ಒಲವು ತೋರಿದ್ದಾರೆ ಎಂದರು.
ಅಭಿವೃದ್ಧಿಗೆ ಪೂರಕ: ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ತನ್ನ ಗೆಲುವಿಗೆ ಸ್ಫೂರ್ತಿ ಯಾಗಲಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಸರ್ವ ಸಮುದಾಯಗಳ ಅಭಿವೃದ್ಧಿ ಪೂರಕ ಅಂಶ ಗಳನ್ನು ನೀಡಲಾಗಿದೆ ಎಂದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬ್ಯಾಲಕೆರೆ ಮಹೇಶಯ್ಯ ಮಾತನಾಡಿ, ಹೇಮಾವತಿ ನದಿ ನೀರನ್ನು ಮಾಗಡಿಯ ಎಲ್ಲಾ ಕೆರೆಗಳಿಗೆ ತುಂಬಿಸುವ ಕೆಲಸ ತಮ್ಮದು. ಟಿ.ಎ.ರಂಗಯ್ಯ ಅವರ ದೂರದೂಷ್ಟಿಯ ಹಿನ್ನೆಲೆಯಲ್ಲಿ ಮಾಗಡಿಗೆ ಯೋಜನೆ ತಯಾರಿಸಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಗುವುದು ಸೂರ್ಯ ಚಂದ್ರನಷ್ಟೆ ಸತ್ಯ. ಹೇಮಾವತಿ ನದಿ ನೀರನ್ನು ತುಂಬಿಸಲು ಕಾರ್ಯೋನ್ಮಖರಾಗುತ್ತೇವೆ.
ಎಂ.ಸಿ.ಹನುಮಂತರಾಜು ಕ್ಷೇತ್ರದ ನಾಡಿಮಿಡಿತ ಕಂಡವರಾಗಿದ್ದಾರೆ. ಒಮ್ಮೆ ಹನುಮಂತರಾಜು ಅವರು ಸೋಲನ್ನು ಕಂಡಿರುವುದರಿಂದ ಈ ಬಾರಿ ಮತದಾರರು ಹಣ, ಮದ್ಯ ಇನ್ನಿತರೆ ವಸ್ತುಗಳಿಗೆ ಆಸೆ ಬೀಳದೆ ಬಿಜೆಪಿಗೆ ಮತ ಮತದಾರರು ಮತ ಹಾಕಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಲೋಕೇಶ್, ಮಹದೇವಯ್ಯ, ಚಕ್ರಬಾಇ ಜಗದೀಶ್, ಲಿಂಗಯ್ಯ, ಕೊಟ್ಟಗಾರಹಳ್ಳಿ ರೇವಣ್ಣ, ಮತ್ತಿಕೆರೆ ರವೀಶ, ದರ್ಶನ್, ಅರುಣ್ ಅಬ್ಬೇಗೌಡ, ಚುಂಚನಕುಪ್ಪೆ ಜಗದೀಶ್ ಇತರರು ಉಪಸ್ಥಿತರಿದ್ದರು.