ಬೆಳಗಾವಿ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕುಂದಾನಗರಿ ಬೆಳಗಾವಿ ಸೋಮವಾರ ಸಾವಿರಾರು ಜನರ ಸಮ್ಮುಖದಲ್ಲಿ ಐತಿಹಾಸಿಕ ದಾಖಲೆ ಬರೆಯಿತು.
ಬೆಳಗ್ಗೆ ಸರಿಯಾಗಿ 8.45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕಿಲ್ಲಾ ಕೆರೆ ಆವರಣದಲ್ಲಿ ನಿರ್ಮಾಣ ಮಾಡಿರುವ ಉದ್ಯಾನವನದಲ್ಲಿ ದೇಶದ ಅತ್ಯಂತ ಎತ್ತರದ ರಾಷ್ಟ್ರಧ್ವಜಾರೋಹಣ ಮಾಡಿದರು.
110 ಮೀಟರ್ ಎತ್ತರದ ಧ್ವಜಸ್ತಂಭದ ಮೇಲೆ 120 ಅಡಿ ಉದ್ದ ಹಾಗೂ 80 ಅಡಿ ಅಗಲದ ತ್ರಿವರ್ಣ ಧ್ವಜ ಸರಿಯಾಗಿ 9 ಗಂಟೆಗೆ ಹಾರಾಡಿದಾಗ ನೆರೆದಿದ್ದ ಸಾವಿರಾರು ಜನರ ಕರತಾಡನ ಮುಗಿಲುಮುಟ್ಟಿತು. ರಾಷ್ಟ್ರಗೀತೆ ಮೊಳಗಿತು.
ಬೆಳಿಗ್ಗೆ 7.30 ರಿಂದಲೇ ಕಿಲ್ಲಾ ಕೆರೆ ಆವರಣಕ್ಕೆ ಧಾವಿಸಿ ಬಂದಿದ್ದ ಸಾವಿರಾರು ಜನರಿಗೆ ಮಾ.12 ಸ್ವಾತಂತ್ರÂ ದಿನಾಚರಣೆಯಂತೆ ಕಂಡಿತು. ಇಂದಿನಿಂದ ನಿತ್ಯ ಹಾರಾಡಲಿರುವ ಈ ತ್ರಿವರ್ಣ ಧ್ವಜದ ಆವರಣ ನೆಚ್ಚಿನ ಪ್ರವಾಸಿ ತಾಣವಾಗಿ ಬದಲಾಗಿದ್ದು, ಧ್ವಜ ರಾತ್ರಿ ವೇಳೆ ಕಾಣಲು ಫೋಕಸ್ ದೀಪದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಧ್ವಜದ ವಿಶೇಷ:
ಎತ್ತರ: 110 ಮೀಟರ್
ಧ್ವಜದ ಅಳತೆ: 120 ಮೀ ಉದ್ದ. 80 ಮೀ ಅಗಲ
ಧ್ವಜಸ್ತಂಭದ ತೂಕ: 36 ಟನ್