Advertisement
ಸ್ವರಾಜ ಇಂಡಿಯಾ ಪಕ್ಷದಿಂದ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಕ್ರಿಯಾಶೀಲ ಕಾರ್ಯಕರ್ತರ ಸಮಾಲೋಚನಾ ಸಭೆ ಹಾಗೂ ನಗರ, ಗ್ರಾಮಾಂತರ ಘಟಕ ಉದ್ಘಾಟನೆಯಲ್ಲಿ ಮಾತನಾಡಿದರು.
Related Articles
Advertisement
ಈ ಹಿನ್ನೆಲೆಯಲ್ಲಿ ಸ್ವರಾಜ ಇಂಡಿಯಾ ಮುಖ್ಯಧಾರೆಯ ರಾಜಕಾರಣದ ಮುಂಚೂಣಿಗೆ ಬರುವ ಮೂಲಕ ಸಮಗ್ರ ಚಳವಳಿಗೆ ನಾಂದಿ ಹಾಡಿ, ಜನರ ಪ್ರಭುತ್ವವನ್ನು ಮರು ಸ್ಥಾಪಿಸಬೇಕಿದೆ ಎಂದರು. ಪತ್ರಕರ್ತ ಸುಗತ ಶ್ರೀನಿವಾಸರಾಜು, ಜನಮುಖೀ ಚಿಂತನೆ ಮೇಲೆ ನಡೆಯುತ್ತಿರುವ ಸ್ವರಾಜ್ ಇಂಡಿಯಾ ಪರ್ಯಾಯ ರಾಜಕಾರಣವನ್ನು ಕೈಬಿಟ್ಟು, ಮುಖ್ಯಧಾರೆಯಲ್ಲಿ ಸಾಗುವ ಮೂಲಕ ಪ್ರಮುಖ ರಾಜಕೀಯ ಪಕ್ಷಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಸಜಾjಗಬೇಕು ಎಂದು ಹೇಳಿದರು.
ಇದೇ ವೇಳೆ ಪರ್ಯಾಯ ರಾಜಕಾರಣಕ್ಕಾಗಿ ಸ್ವಾಗತ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಪಕ್ಷದ ಸಂಚಾಲಕ ಅಮ್ಜದ್ ಪಾಷಾ, ಮುಖಂಡರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಬಡಗಲಪುರನಾಗೇಂದ್ರ, ಕೆ.ಪಿ.ಸಿಂಗ್, ಪುಷ್ಪಾ, ಕೆ.ಟಿ.ಗಂಗಾಧರ, ಅಭಿರುಚಿ ಗಣೇಶ್ ಮತ್ತಿತರರಿದ್ದರು.ಧರ್ಮ-ಜಾತಿ ರಾಜಕಾರಣದ ಗುರುತಾಗಿದೆ…
ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ಜಾತಿಯೇ ರಾಜಕಾರಣದ ಐಡೆಂಟಿಟಿ ಆಗಿದೆ. ಈ ಅಂಶಗಳ ಮೇಲೆ ರಾಜಕೀಯ ಪಕ್ಷಗಳು ರಾಜಕಾರಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ವಿಚಾರ, ಸಂವಿಧಾನದ ಆಶಯಗಳಿಗೆ ಬದ್ಧರಾದವರು ಮುಖ್ಯ ರಾಜಕಾರಣ ವ್ಯವಸ್ಥೆಯಲ್ಲಿರಬೇಕು. ಆದರೆ, ಇಂದು ಸದಾ ಪ್ರಜಾಪ್ರಭುತ್ವದ ಮೌಲ್ಯವನ್ನು ಉಲ್ಲಂಘನೆ ಮಾಡುವ ಪಕ್ಷಗಳೇ ಮುಖ್ಯವಾಹಿನಿಯಲ್ಲಿ ರಾರಾಜಿಸುತ್ತಿವೆ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ವಿಷಾದಿಸಿದರು. ಸ್ವರಾಜ್ ಇಂಡಿಯಾ ಕೇವಲ ರಾಜಕಾರಣ ಮಾತ್ರವಲ್ಲದೆ, ಧ್ಯೇಯಬದ್ಧ ನಡೆ ಮತ್ತು ಪಡೆ ಆಗಿದೆ. ಚುನಾವಣಾ ರಾಜಕಾರಣದ ಜತೆಗೆ ಜನಪರ ಹೋರಾಟ, ಅಂತರಂಗದ ಸಮತ್ವವೂ ರಾಜಕಾರಣವಾಗಿದೆ. ಸಹನೆ, ಪ್ರೀತಿ, ಸಹಬಾಳ್ವೆ, ಸಮಾನತೆಯೇ ಪಕ್ಷದ ಮೊದಲ ಹೆಜ್ಜೆ. ಈ ತತ್ವಗಳಿಗೆ ಬದ್ಧವಾದ ರಾಜಕಾರಣ ನಮ್ಮದಾಗಿದೆ.
-ದೇವನೂರು ಮಹದೇವ, ಸಾಹಿತಿ