Advertisement

ಶೀಘ್ರದಲ್ಲಿ ದೇಶಿ ಸೂಪರ್‌ ಕಂಪ್ಯೂಟರ್‌

06:50 AM Jul 24, 2017 | Team Udayavani |

ನವದೆಹಲಿ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ “ಮೇಕ್‌ ಇನ್‌ ಇಂಡಿಯಾ’ ಯೋಜನೆಯ ಭಾಗವಾಗಿ
ಭಾರತದಲ್ಲೇ ಸೂಪರ್‌ ಕಂಪ್ಯೂಟರ್‌ಗಳು ರೂಪುಗೊಳ್ಳಲಿವೆ. ಇದಕ್ಕಾಗಿ ಮೂರು ಹಂತದ “ನ್ಯಾಷನಲ್‌ ಸೂಪರ್‌ ಕಂಪ್ಯೂಟರ್‌ ಮಿಷನ್‌’ ಎಂಬ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ.

Advertisement

ಕಾರ್ಯಕ್ರಮದ ಮೊದಲ ಎರಡು ಹಂತಗಳಲ್ಲಿ, ಹೈ ಸ್ಪೀಡ್‌ ಇಂಟರ್‌ನೆಟ್‌ ಸ್ವಿಚ್‌ಗಳು ಮತ್ತು ಕಂಪ್ಯೂಟ್‌ ನೋಡ್ಸ್‌ ರೀತಿಯ ಸಬ್‌ಸಿಸ್ಟಮ್‌ಗಳನ್ನು ದೇಶೀಯ ಮಟ್ಟದಲ್ಲೇ ವಿನ್ಯಾಸಗೊಳಿಸಲು ಮತ್ತು ಉತ್ಪಾದಿಸಲು ಆದ್ಯತೆ ನೀಡಲಾಗುತ್ತದೆ. 4,500 ಕೋಟಿ ರೂ. ವೆಚ್ಚದ ಯೋಜನೆಗೆ ಆರ್ಥಿಕ ವ್ಯವಹಾರಗಳ ಸದನ ಸಮಿತಿಯು ಕಳೆದ
ಮಾರ್ಚ್‌ನಲ್ಲಿ ಅನುಮೋದನೆ ನೀಡಿತ್ತು.

ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯ ಕೋರಿಕೆಯು ಈಗಾಗಲೇ ಕಡೆಯ ಹಂತದಲ್ಲಿದ್ದು, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಪುಣೆಯ ಸೆಂಟರ್‌ ಫಾರ್‌ ಡೆವಲಪೆ¾ಂಟ್‌ ಆಫ್ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ (ಸಿ-ಡಿಎಸಿ) ಸಂಸ್ಥೆಯು ಯೋಜನೆ ಜಾರಿಯ ಹೊಣೆ ಹೊತ್ತಿದೆ. ಮೂರು ಹಂತಗಳಲ್ಲಿ 50
ಸೂಪರ್‌ ಕಂಪ್ಯೂಟರ್‌ಗಳನ್ನು ರೂಪಿಸಿ, ಅವುಗಳನ್ನು ದೇಶದ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಬಳಸಿಕೊಳ್ಳುವ ಉದ್ದೇಶವನ್ನು ಕೇಂದ್ರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next