Advertisement

ಚರಂಡಿಯಲ್ಲಿ ತುಕ್ಕು ಹಿಡಿದ ಕಂಟ್ರಿ ಪಿಸ್ತೂಲುಗಳು

10:58 PM Feb 12, 2020 | Team Udayavani |

ಬೆಳಗಾವಿ: ತುಕ್ಕು ಹಿಡಿದ ನಾಲ್ಕು ಕಂಟ್ರಿ ಪಿಸ್ತೂಲುಗಳು ತಾಲೂಕಿನ ವಾಘವಡೆ ಗ್ರಾಮದ ಹೊರವಲಯದ ಚರಂಡಿಯಲ್ಲಿ ಪತ್ತೆಯಾಗಿವೆ. ಗ್ರಾಮದ ಹೊರವಲಯದ ಚರಂಡಿಯ ಕಸದಲ್ಲಿ ಬಿದ್ದಿದ್ದ ನಾಲ್ಕು ಕಂಟ್ರಿ ಪಿಸ್ತೂಲುಗಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪಿಸ್ತೂಲುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪಿಸ್ತೂಲುಗಳು ಇಲ್ಲಿಗೆ ಹೇಗೆ ಬಂದವು?,

Advertisement

ಯಾರು ಇವುಗಳನ್ನು ಎಸೆದಿರಬಹುದು?, ಇದಕ್ಕೆ ಏನಾದರೂ ಅಪರಾಧ ಪ್ರಕರಣದ ಹಿನ್ನೆಲೆ ಇದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 15-20 ವರ್ಷಗಳ ಹಿಂದಿನ ಕಮ್ಮಾರಿಕೆಯಲ್ಲಿ ತಯಾರಾದ ಲೋಹದ ಪಿಸ್ತೂಲುಗಳು ಇದಾಗಿದ್ದು, ಸುಮಾರು ಐದಾರು ತಿಂಗಳ ಹಿಂದೆಯೇ ಇಲ್ಲಿ ಎಸೆದು ಹೋಗಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರತಿ ಕ್ರಿಯೆ ನೀಡಿರುವ ಬೆಳಗಾವಿ ಗ್ರಾಮೀಣ ಪೊಲೀಸರು, ಈ ಕುರಿತು ವಿಜಯಪುರ ಪೊಲೀಸರನ್ನು ಸಂಪರ್ಕಿಸಲಾಗಿದೆ.

ಅನೇಕ ವರ್ಷಗಳ ಹಿಂದೆ ಇಂತಹ ಪಿಸ್ತೂಲು ಗಳು ಬಳಕೆಯಲ್ಲಿದ್ದವು. ಈಗ ಈ ತರಹದ ಪಿಸ್ತೂಲು ಗಳು ಎಲ್ಲಿಯೂ ಬಳಕೆ ಆಗಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು. ಬೆಳಗಾವಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್‌ ಸುನೀಲ ಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಂಟ್ರಿ ಪಿಸ್ತೂಲುಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಮುಂಚೆ ಇಂತಹ ಕಂಟ್ರಿ ಪಿಸ್ತೂಲುಗಳು ಜಪ್ತಿ ಆಗಿ ವೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next