Advertisement

ಗ್ರಾಮ ಪ್ರಗತಿಯಾದ್ರೆ ದೇಶಾಭಿವೃದ್ಧಿ

03:47 PM Oct 18, 2019 | Team Udayavani |

ಕೋಲಾರ: ಗ್ರಾಮ ಪ್ರಗತಿ ಕಂಡರೆ ದೇಶ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಹಲವು ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ತಾಲೂಕಿನ ತಂಬಿಹಳ್ಳಿ ಗ್ರಾಮದ ಶ್ರೀಸತ್ಯಮ್ಮ ದೇವಾಲಯ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಹಾಗೂ ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ಗುರುವಾರ ನಡೆದ ಸಾಮೂಹಿಕ ಶ್ರೀಗಣಹೋಮ ಮತ್ತು ನವಗ್ರಹ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಿನನಿತ್ಯ ಜಂಜಾಟಗಳಲ್ಲಿ ಮನುಷ್ಯರು ಭಕ್ತಿ ಭಾವನೆ ಮರೆಯುತ್ತಿದ್ದಾರೆ. ಹಿಂದಿನ ಕಾಲದ ಧಾರ್ಮಿಕ ಚಟುವಟಿಕೆಗಳು ಈಗ ನಡೆಯುತ್ತಿಲ್ಲ. ಪೂಜೆ ಪುನಸ್ಕಾರಗಳು ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ಕಾಣಬಹುದು. ಧರ್ಮಸ್ಥಳದ ಸಂಸ್ಥೆಯು ಗ್ರಾಮಗಳಲ್ಲಿ ಸ್ತ್ರೀಶಕ್ತಿ ಸಂಘಗಳನ್ನು ಮಾಡಿಸಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಜೊತೆಗೆ ದೇವರ ಪೂಜೆ ನಡೆಸುವ ಮುಖಾಂತರ ಧಾರ್ಮಿಕ ಶಕ್ತಿ ಹೆಚ್ಚಿಸಿದೆ ಎಂದು ಹೇಳಿದರು.

ಧರ್ಮಸ್ಥಳ ಸಂಸ್ಥೆಯ ನಿರ್ದೇಶಕ ಜೆ.ಚಂದ್ರಶೇಖರ್‌ ಮಾತನಾಡಿ, ದೇವರನ್ನು ನಾವು ಮಾಡುವ ಪ್ರಾಮಾಣಿಕ ಕಾಯಕದಲ್ಲಿ ಕಾಣಬೇಕು. ಯಾವ ಜಾತಿ ಧರ್ಮ ಮುಖ್ಯವಲ್ಲ, ಮಾನವೀಯತೆಯೇ ಮುಖ್ಯ. ತಂದೆ ತಾಯಿ, ಬಡವ ನಿರ್ಗತಿಕರನ್ನು ಪ್ರೀತಿಸುವುದೇ ಧರ್ಮ ಎಂದು ಹೇಳಿದರು. ಮುಖಂಡ ಮುನಿವೆಂಕಟಪ್ಪ ಮಾತನಾಡಿ, ಪರಂಪರೆ, ಪದ್ಧತಿ ಮರೆಯುತ್ತಿರುವ ಇಂದಿನ ಪೀಳಿಗೆಗೆ ಈ ರೀತಿಯ ಧಾರ್ಮಿಕ ಕಾರ್ಯಗಳು ಅವಶ್ಯಕ ಎಂದರು. ಸೀಸಂದ್ರ ತಾಪಂ ಸದಸ್ಯ ರಮೇಶ್‌, ಹುತ್ತೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಶಿಕ್ಷಕರಾದ ಮುನಿರಾಜು, ನಾಗರಾಜ್ , ಸಂಸ್ಥೆ ಯೋಜನಾಧಿಕಾರಿ ಚಂದ್ರಶೇಖರ್‌, ಮೇಲ್ವಿಚಾರಕ ಗುರುರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next