ಜೇವರ್ಗಿ: ಉಪದೇಶ ಮಾಡಿ ದುಡಿಯದೇ ಇರುವುದು ಋಷಿ ಸಂಸ್ಕೃತಿ. ಸತ್ಯ, ಶುದ್ಧ ಕಾಯಕದಿಂದ ದುಡಿಯುವುದು ಕೃಷಿ ಸಂಸ್ಕೃತಿ. ದೇಶ ಅಭಿವೃದ್ಧಿ ಋಷಿ ಸಂಸ್ಕೃತಿಯಿಂದ ಆಗೋದಿಲ್ಲ, ಕೃಷಿ ಸಂಸ್ಕೃತಿಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಹೇಳಿದರು. ಪಟ್ಟಣದ ಮಹಿಬೂಬ ಪಂಕ್ಷನ್ ಹಾಲ್‌ನಲ್ಲಿ ಪ್ರಗತಿಪರ ಸೌಹಾರ್ದ ವೇದಿಕೆ ತಾಲೂಕು ಘಟಕದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಅಸಂಘಟಿತ ಕಾರ್ಮಿಕರ ಜಾಗೃತಿ ಸಮಾವೇಶ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಮೂಲ ಸಂಸ್ಕೃತಿ, ಪರಂಪರೆ ಹಾಳು ಮಾಡಲು ಹೊರಟಿದೆ. ಮೊದಲು ದುಡಿಯುವ ವರ್ಗದ ಜನರ ಹಣೆಬರಹ ಬದಲಾಗಬೇಕಿದೆ. ದೇಶದಲ್ಲಿ ಹಿಂದೂ-ಮುಸ್ಲಿಂ ಎನ್ನುವ ಬೇಧಭಾವ ಹೆಚ್ಚಾಗಿ ಕೋಮು ಗಲಭೆಗಳಾಗುತ್ತಿವೆ. ಗೋವಿನ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಶಂಕರ ಕಟ್ಟಿಸಂಗಾವಿ, ಪಿಎಸ್‌ಐ ಕೃಷ್ಣ ಸುಬೇದಾರ ಅವರನ್ನು ಸೌಹಾರ್ದ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಸಿಪಿಐ ಹಿರಿಯ ಮುಖಂಡ ಗೋಪಾಲರಾವ ಗುಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಸೌಹಾರ್ದ ವೇದಿಕೆ ಮುಖಂಡ ಬಾಬು ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ಎಸ್.ಸಲಗರ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಸ್ತಿ, ಸಿಪಿಐ ಮುಖಂಡ ಬಾಬುಮಿಯಾ ಗಂವ್ಹಾರ, ಮಹೇಶಕುಮಾರ ರಾಠೊಡ, ಮಹ್ಮದ್ ಸೋಫಿ ಗಂವ್ಹಾರ, ಮೈಲಾರಿ ಬಣಮಿ, ಗೌಸ್ ಮೈನುದ್ದಿನ್ ಖಾದ್ರಿ, ಅಪ್ಪಾಸಾಬ ಕೋಳಕೂರ, ಸಿದ್ದಣ್ಣ ರಾಜವಾಳ, ಗುರುನಾಥ ಸಾಹು ರಾಜವಾಳ,
ನಾಗಮ್ಮ ನರಿಬೋಳ, ಮಹ್ಮದ್ ಹನೀಫ್ ಬಾಬಾ, ಕೇರನಾಥ ಪಾರ್ಶಿ, ನಿಂಗಣ್ಣಗೌಡ ನಂದಿಹಳ್ಳಿ, ರಾಮನಾಥ ಭಂಡಾರಿ, ವೆಂಕು
ಗುತ್ತೇದಾರ, ಅನೀತಾ ಪಾರ್ಶಿ, ಅಂಜನಾ ರಾಠೊಡ ಮುಖ್ಯ ಅತಿಥಿಗಳಾಗಿದ್ದರು. ಸೌಹಾರ್ದ ವೇದಿಕೆಯ ರಾಜು ಮುದ್ದಡಗಿ ಸ್ವಾಗತಿಸಿದರು, ಪಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ದಿನ್ನಿ ನಿರೂಪಿಸಿದರು, ಮಲ್ಲಿಕಾರ್ಜುನ ಹಂಗರಗಿ ವಂದಿಸಿದರು. ಅಸಮಾನತೆ
ಹೋಗಲಾಡಿಸಿ ಚೂರು ಗಂಜಿಗಾಗಿ ಸೇರು ಬೆವರು ಸುರಿಸುವ ಕಾರ್ಮಿಕರ ಬದುಕು ದಿವಾಳಿ ಹಂತದಲ್ಲಿದೆ. ಕಾರ್ಮಿಕರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುವುದರ ಜೊತೆಗೆ ಸಂಘಟಿತರಾಗಬೇಕು. ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ. ಮೊದಲು ಈ ದೇಶದ ಬಡತನ, ಅಸಮಾನತೆ ಹೋಗಲಾಡಿಸುವಲ್ಲಿ ನಿಟ್ಟಿನಲ್ಲಿ ಸರಕಾರಗಳು ಪ್ರಯತ್ನಿಸಬೇಕು.
ಕೆ. ನೀಲಾ,ಜನವಾದಿ ಮಹಿಳಾ ಸಂಘಟನೆ, ರಾಜ್ಯ ಉಪಾಧ್ಯಕ್ಷೆ