Advertisement
ಅವರು ಬಾಯಾರಿನ ಆವಳ ಮಠದ ಶ್ರೀ ದುರ್ಗಾಸದನ ಸಭಾಭವನದಲ್ಲಿ ನಡೆದ ಮಂಜೇಶ್ವರ ತಾಲೂಕಿನ ಬಾಲಗೋಕುಲಗಳ ಗೋಕುಲೋತ್ಸವದ ಸಮಾರೋಪ ಸಭೆಯಲ್ಲಿ ಮಾತನಾಡಿದರು.
ಗೋಕುಲೋತ್ಸವದ ಆರಂಭದಲ್ಲಿ ಬಾಲಗೋಕುಲದ ಮಕ್ಕಳ ಆಕರ್ಷಕ ಶೋಭಾಯಾತ್ರೆ ಸರ್ಕುತ್ತಿಯಿಂದ ಆವಳ ಮಠದವರೆಗೆ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಸುಬ್ರಮಣ್ಯ ಭಟ್ ಅವರು ವಹಿಸಿದ್ದರು. ಅತಿಥಿಗಳಾಗಿ ಎನ್‌ಟಿಯು ರಾಜ್ಯ ಸಮಿತಿಯ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಪಿ. ಹಾಗೂ ಕೃಷ್ಣ ಗುರುಸ್ವಾಮಿ ಕುರುಡಪದವು ಅವರು ವಹಿಸಿದ್ದರು. ಮಂಜೇಶ್ವರ ತಾಲೂಕಿನ ಪೈವಳಿಕೆ, ಮೀಂಜ, ವರ್ಕಾಡಿ ಹಾಗೂ ಮಂಜೇಶ್ವರ ಪಂಚಾಯತ್‌ಗೆ ಒಳಪಟ್ಟ ಬಾಲಗೋಕುಲಗಳ ಸುಮಾರು 230 ಮಂದಿ ಮಕ್ಕಳು ಈ ಗೋಕುಲೋತ್ಸವದಲ್ಲಿ ಭಾಗವಹಿಸಿದ್ದರು
Related Articles
ಅನಂತರ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಸಂತ ಪಂಡಿತ್ ಗುಂಪೆ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನದೊಂದಿಗೆ ಗಣಪತಿ ಭಟ್ ಆವಳ ಮಠ ಅವರು ನಡೆಸಿದರು. ಪ್ರಸ್ತಾವನೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ್ ವಿಶ್ವನಾಥ ನಡೆಸಿದರು. ನಂತರ ವಿವಿಧ ಬಾಲಗೋಕುಲದ ಮಕ್ಕಳದ ಸಾಮೂಹಿಕ ಬೌದ್ಧಿಕ, ಶಾರೀರಿಕ ಕಾರ್ಯಕ್ರಮಗಳು ನಡೆದವು. ಭೋಜನದ ನಂತರ ಬಾಲಗೋಕುಲ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
Advertisement