Advertisement

ಚೀನದ ಕಳಪೆ ಗುಣಮಟ್ಟದ ಮಾಸ್ಕ್ ಗಳು ತಿರಸ್ಕೃತ

09:29 AM Apr 02, 2020 | sudhir |

ರೋಮ್‌: ಜಗತ್ತಿಗೆ ಮಹಾಮಾರಿ ಕೋವಿಡ್‌ -19 ವೈರಸ್‌ ಹರಡಿದ ಆರೋಪಕ್ಕೆ ಗುರಿಯಾಗಿರುವ ಚೀನಾ ಪೂರೈಸುತ್ತಿರುವ ಕಿಟ್‌ ಹಾಗೂ ಟೆಸ್ಟ್‌ ಕಿಟ್‌ಗಳನ್ನು ಹಲವು ದೇಶಗಳು ತಿರಸ್ಕರಿಸತೊಡಗಿವೆ.

Advertisement

ಸ್ಪೇನ್‌, ಇಟಲಿ ಹಾಗೂ ನೆದರ್‌ಲ್ಯಾಂಡ್‌ ದೇಶಗಳು, ಚೀನ ಪೂರೈಸುತ್ತಿರುವ ಸಾಮಗ್ರಿಗಳು ಕಳಪೆ ಗುಣಮಟ್ಟದವು. ಬಳಸಲು ಯೋಗ್ಯವಲ್ಲವು ಎಂದು ಸಾರಾಸಗಟಾಗಿ ತಿರಸ್ಕರಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಕಳೆಪೆ ಉತ್ಪನ್ನ
ಸ್ಪೇನ್‌, ಟರ್ಕಿ ಮತ್ತು ನೆದರ್‌ಲ್ಯಾಂಡ್‌ ಕೋವಿಡ್‌ -19 ಸೋಂಕಿನಿಂದ ನಲುಗಿವೆ. ಅಲ್ಲೀಗ ಮೂಲ ಚಿಕಿತ್ಸಾ ಕೀಟ್‌ಗಳ ಅಭಾವವಿದೆ. ಇಂಥ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ಚೀನ ಹೇಳಿತ್ತು. ಅದರಂತೆ ಚೀನ ಸಾಕಷ್ಟು ಸುರಕ್ಷಾ ಕವಚಗಳು, ವೈದ್ಯಕೀಯ ಕಿಟ್‌ಗಳು ಹಾಗೂ ಮಾಸ್ಕ್ಗಳನ್ನು ಕಳುಹಿಸಿದೆ. ಈ ವಸ್ತುಗಳನ್ನು ಗಮನಿಸಿದ ಆಯಾ ದೇಶಗಳ ವೈದ್ಯರು, ಇವೆÉಲವೂ ಕಳಪೆ ಗುಣಮಟ್ಟದವು. ಇವುಗಳನ್ನು ಬಳಸದಿರುವುದೇ ಕ್ಷೇಮ ಎಂದು ತಿಳಿಸಿದ್ದಾರೆ.

ಶೇ.80ರಷ್ಟು ಸಂವೇದನಾಶೀಲತೆ ಶಕ್ತಿ ಅಗತ್ಯ
ಸ್ಪೇನ್‌ನ ಮೈಕ್ರೋಬಯಾಲಜಿ ತಜ್ಞರು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಪರೀಕ್ಷಾ ಕಿಟ್‌ಗಳು ಶೇ.80ಕ್ಕಿಂತ ಹೆಚ್ಚು ಸಂವೇದನಾಶೀಲತೆಯನ್ನು ಹೊಂದಿರಬೇಕು. ಅದರೆ ಚೀನದಿಂದ ಬಂದಿರುವ ಉತ್ಪನ್ನ ಶಂಕಿತರಲ್ಲಿ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಖಚಿತ ಪಡಿಸುವಲ್ಲಿ ವಿಫಲವಾಗಿವೆ.

ಸುಮಾರು 60 ಸಾವಿರ ರೋಗಿಗಳಲ್ಲಿ ವೈರಸ್‌ ಪತ್ತೆಯನ್ನು ನಿಖರವಾಗಿ ಮಾಡಲು ಅಸಾಧ್ಯವಾಗಿದೆ ಎಂದು ನಿಖರವಾಗಿ ತಿಳಿಸಿದ್ದಾರೆ.

Advertisement

ಪರವಾನಿಗೆ ಇಲ್ಲದ ಕಂಪೆನಿಯ ಉತ್ಪನ್ನ
ವಿಚಿತ್ರವೆಂದರೆ, ಚೀನದಲ್ಲಿರುವ ಸ್ಪೇನ್‌ ರಾಯಭಾರ ಸಂಸ್ಥೆಯು ಅಧ್ಯಯನ ಮಾಡಿದ್ದು, ಈ ಮೂರು ರಾಷ್ಟ್ರಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವ ಕಂಪೆನಿಯು ಅನಧಿಕೃತ. ಅದಕ್ಕೆ ಅಧಿಕೃತವಾದ ವೈದ್ಯಕೀಯ ಪರವಾನಿಗೆ ಇಲ್ಲ ಎಂಬುದನ್ನು ಖಚಿತಪಡಿಸಿದೆ.

ಯುರೋಪ್‌ನಿಂದ ಖಡಕ್‌ ವಾರ್ನಿಂಗ್‌
ಈ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಯುರೋಪ್‌ ಯೂನಿಯನ್‌ ನ ಮುಖ್ಯ ರಾಜತಾಂತ್ರಿಕ ಜೋಸೆಫ್ ಬೊರೆಲ್‌, ಚೀನ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಜಕೀಯ ಮತ್ತು ಭೌಗೋಳಿಕ ಅಂಶಗಳನ್ನು ಮುಂದಿಟ್ಟುಕೊಂಡು ತನ್ನ ಹೀನಾಯ ಬುದ್ಧಿ ತೋರಿಸುತ್ತಿದೆ. ಇದರ ದುಷ್ಪರಿಣಾಮವನ್ನು ಮಂದೊಂದು ದಿನ ಅನುಭವಿಸಬೇಕಾದೀತು ಎಂದು ಖಡಕ್‌ ಆಗಿ ಎಚ್ಚರಿಸಿದ್ದಾರೆ.

ಚೀನದಿಂದ ನೆರವು ಕೇಳುವ ಮುನ್ನ ಒಮ್ಮೆ ಯೋಚಿಸಿ
ಕೋವಿಡ್‌ -19 ತಡೆಗಟ್ಟಲು ಮತ್ತು ನಿಯಂತ್ರಿಸಲು ವೈದ್ಯಕೀಯ ನೆರವು ನೀಡುವ ಚೀನ ಪ್ರಸ್ತಾಪವನ್ನು ಸ್ವೀಕರಿಸಲು ಹಲವು ರಾಷ್ಟ್ರಗಳ ಸರಕಾರ ಚಿಂತನೆ ನಡೆಸುತ್ತಿದ್ದರೂ, ಎಚ್ಚರಿಕೆಯ ವಿಧಾನವನ್ನು ಅನುಸರಿಸಬೇಕಿದೆ. ಏಕೆಂದರೆ ಎರಡನೇ ಸೋಂಕು ಪೀಡಿತ ಕೆಟ್ಟ ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಸ್ಪೇನ್‌ ಸೇರಿದಂತೆ ಕನಿಷ್ಠ ಮೂರು ದೇಶಗಳು ಚೀನದಿಂದ ಆಮದು ಮಾಡಿಕೊಂಡ ಪರೀಕ್ಷಾ ಕಿಟ್‌ಗಳು ಕಳಪೆಯಾಗಿವೆ ಎಂದು ವರದಿಯಾಗಿರುವುದನ್ನು ಗಮನದಲ್ಲಿರಿಸಿ ಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next