Advertisement

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

06:33 PM Mar 28, 2024 | Team Udayavani |

ಕಾಸರಗೋಡು: ಬಾಡಿಗೆ ಮನೆಯಲ್ಲಿ ಬಚ್ಚಿಡಲಾಗಿದ್ದ, ಕೇಂದ್ರ ನಿಷೇಧಿಸಿದ 2000 ರೂ. ಮೌಲ್ಯದ 6.69 ಕೋಟಿ ರೂ. ವಶಪಡಿಸಿದ ಪ್ರಕರಣದಲ್ಲಿ ಕೇಂದ್ರ ಏಜೆನ್ಸಿ ತನಿಖೆ ಆರಂಭಗೊಂಡಿದೆ.

Advertisement

ಕೇರಳ ಪೊಲೀಸರು ಆರಂಭದಲ್ಲಿ ನಡೆಸಿದ ತನಿಖೆಯಿಂದ ಹೆಚ್ಚಿನ ಪ್ರಗತಿ ಸಾಧ್ಯವಾಗದ ಕಾರಣದಿಂದ ಕೇಂದ್ರ ಏಜೆನ್ಸಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ಹೊಸದುರ್ಗ ಅಂಬಲತ್ತರ ಪಾರಪ್ಪಳ್ಳಿ ಗುರುಪುರದ ಬಾಡಿಗೆ ಮನೆಯಲ್ಲಿ ನೋಟುಗಳ ಬೃಹತ್‌ ದಾಸ್ತಾನು ಪತ್ತೆಯಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು. ಬಂಧಿತರಿಬ್ಬರು ಈ ಹಿಂದೆ 1000 ರೂ. ಮುಖಬೆಲೆಯ ಕರೆನ್ಸಿಗಳನ್ನು ವಿತರಿಸಿದ್ದಾಗಿ ತನಿಖೆಯಿಂದ ತಿಳಿದು ಬಂದಿತ್ತು. ಆದರೆ ಈ ನೋಟುಗಳನ್ನು ಎಲ್ಲಿ ಮುದ್ರಿಸಲಾಗಿದೆ, ಇದರ ಹಿಂದಿರುವ ವ್ಯಕ್ತಿಗಳು ಯಾರು ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಕಲ್ಲಿಕೋಟೆ, ಮಲಪ್ಪುರ ನಿವಾಸಿಗಳು ಇದರ ಹಿಂದಿದ್ದಾರೆಂದು ಆರೋಪಿಗಳು ಹೇಳಿಕೆ ನೀಡಿದ್ದರು. ಬಂಧಿತರು ಕರೆನ್ಸಿ ವಿತರಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next